ಮುಂಬೈ/ನವದೆಹಲಿ: ಟೆಲಿಗ್ರಾಂ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್ ಮೂಲಕ ಹಿಂದೂ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ ಅಂಶವೊಂದು ಬೆಳಕಿಗೆ ಬಂದಿದೆ.
ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಮಾರುವ ಹೇಯ ಜಾಲ ಬಹಿರಂಗವಾಗುತ್ತಿದ್ದಂತೆಯೇ ಈ ಪ್ರಕರಣ ದೃಢಪಟ್ಟಿದೆ.
ಹೊಸ ಕೇಸಿನ ಬಗ್ಗೆ ಟ್ವಿಟರ್ ಮೂಲಕ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ದೂರು ಸಲ್ಲಿಕೆಯಾಗಿದೆ. ಕೂಡಲೇ ಅದಕ್ಕೆ ಸ್ಪಂದಿಸಿದ ಸಚಿವರು “ಎರಡೂ ಚಾನೆಲ್‌ಗಳನ್ನು ಬ್ಲಾಕ್ ಮಾಡಿದೆ.
ಕೇಂದ್ರ ಸರ್ಕಾರ ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ’ ಎಂದು ಉತ್ತರ ನೀಡಿದ್ದಾರೆ. ಇದರ ಜತೆಗೆ ಬೈಗುಳ ಅಂಶಗಳನ್ನು ಒಳಗೊಂಡ ಫೇಸ್‌ಬುಕ್ ಪೇಜ್‌ಗಳ ಬಗ್ಗೆಯೂ ದೂರು ಸಲ್ಲಿಕೆಯಾಗಿದೆ. ಅತುಲ್ ಸಕ್ಸೇನಾ ಎಂಬುವರು ಸಲ್ಲಿಸಿದ ದೂರಿನ ಪ್ರಕಾರ 2021ರ ಜೂನ್‌ನಲ್ಲಿಯೇ ಹಿಂದೂ ಮಹಿಳೆಯರನ್ನು ಟಾರ್ಗೆಟ್ ಮಾಡುವ ಚಾನೆಲ್ ರಚಿಸಲಾಗಿತ್ತು. ಜತೆಗೆ ದೆಹಲಿಯ ಪತ್ರಕರ್ತೆಯೊಬ್ಬರೂ ಕೂಡ ತಮ್ಮ ಫೋಟೋ ಅದರಲ್ಲಿ ಬಂದಿದೆ ಎಂದು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಈ ಸಿಹಿ ತಿನಿಸಿನ ಬೆಲೆ ಕೆ.ಜಿ.ಗೆ ಬರೋಬ್ಬರಿ 16 ಸಾವಿರ ರೂಪಾಯಿಯಂತೆ ! ವಿಡಿಯೋ ವೈರಲ್
ಹಣಕ್ಕಾಗಿ ಕೃತ್ಯ:
ಬಿಲ್ಲು ಭಾಯ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ಅವರೆಲ್ಲ ಹಣಕ್ಕಾಗಿ ಈ ಕೃತ್ಯವೆಸಗಿದ್ದಾರೆ ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆ ಹೇಳಿದ್ದಾರೆ. ಉತ್ತರಾಖಂಡದ 12ನೇ ತರಗತಿ ವಿದ್ಯಾರ್ಥಿನಿ ಶ್ವೇತಾ ಸಿಂಗ್ ಎಂಬಾಕೆಯೇ ಜಾಲದ ಸೂತ್ರಧಾರಿ. ಆಕೆ ಬಡ ಕುಟುಂಬದಿಂದ ಬಂದಿದ್ದು, ಕೊರೊನಾದಿಂದಾಗಿ ತಂದೆಯೂ ಅಸುನೀಗಿದ್ದಾರೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಇದ್ದಾರೆ ಮತ್ತು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದರ ಜತೆಗೆ ಇನ್ನೂ ಮೂರು ಆ್ಯಪ್‌ಗ್ಳಿವೆ ಎಂದು ನಗ್ರಾಲೆ ಹೇಳಿದ್ದಾರೆ.