Advertisement

ಪಿಎಚ್‌ಸಿಗಳಲ್ಲಿ ಟೆಲಿ ಮೆಡಿಸಿನ್‌ ತಂತ್ರಜ್ಞಾನದಡಿ ಚಿಕಿತ್ಸೆ

08:26 AM Mar 11, 2017 | |

ಬೆಂಗಳೂರು: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಮೆಡಿಸಿನ್‌ ತಂತ್ರಜ್ಞಾನದಡಿ ಗುಣಮಟ್ಟದ ಚಿಕಿತ್ಸೆಯನ್ನು ತ್ವರಿತವಾಗಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

Advertisement

 ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಇ- ಆರೋಗ್ಯ’ ಕಾರ್ಯಕ್ರಮದಡಿ “ಪಿಎಚ್‌ಸಿ ಮ್ಯಾನೇಜ್‌
ಮೆಂಟ್‌ ಇನ್‌ಫ‌ರ್ಮೇಶನ್‌ ಸಿಸ್ಟ್‌ಂ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಖಾಸಗಿ ಸಹಭಾಗಿತ್ವದೊಂದಿಗೆ ಹಲವಾರು ಕಾರ್ಯಕ್ರಮಗಳ ಮೂಲಕ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನಿರಂತರ ಪ್ರಯತ್ನ
ನಡೆಸಲಾಗುತ್ತಿದೆ ಎಂದರು.

ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಆಸ್ಪತ್ರೆ ಸೇವೆ ಅಗತ್ಯವಿದೆ. ಆದರೆ, ಅವರ ನಿರೀಕ್ಷೆ ತಲುಪಲು
ಸಾಧ್ಯವಾಗುತ್ತಿಲ್ಲ. ಹೀಗಾಗಿ, ಖಾಸಗಿ ಆಸ್ಪತ್ರೆ ಮೊರೆ ಹೋಗುವಂತಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ವೆಚ್ಚ ಭರಿಸುವಷ್ಟು
ಆರ್ಥಿಕವಾಗಿ ಶಕ್ತರಾಗಿರುವುದಿಲ್ಲ. ಇಂತಹ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿರುವಾಗ ನಾನು ಸಚಿವನಾಗಿದ್ದೇನೆ. ಹಾಗಿದ್ದರೂ ಸರ್ಕಾರಿ
ಆಸ್ಪತ್ರೆಗೆ ಬರುವವರಿಗೆ ಉತ್ತಮ ಚಿಕಿತ್ಸೆ ಸಿಗುವ ವಿಶ್ವಾಸ ಮೂಡಿಸಲು ಸಾಧ್ಯವಾದಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ರಾಜ್ಯದ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡಲು ಅವಕಾಶವಿದೆ. ಆದರೆ, ಇದಕ್ಕಾಗಿ ಪೂರಕವಾದ ಉಪಕರಣಗಳನ್ನು ಒದಗಿಸುವಷ್ಟರ ಮಟ್ಟಿಗೆ ಸರ್ಕಾರ ಆರ್ಥಿಕವಾಗಿ ಶಕ್ತವಾಗಿಲ್ಲ
ಎಂದು ಸಚಿವರು ಹೇಳಿದರು.

1000 ಕೇಂದ್ರಗಳಿಗೆ ಟ್ಯಾಬ್ಲೆಟ್‌: ರಾಜ್ಯದಲ್ಲಿ 2,353 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಸಂಸ್ಥೆಯು ಸದ್ಯ 1000 ಪ್ರಾಥಮಿಕ ಕೇಂದ್ರಗಳಿಗೆ ತಲಾ ಒಂದು ಟ್ಯಾಬ್ಲೆಟ್‌ ನೀಡಿದೆ. ಉಳಿದ ಕೇಂದ್ರಗಳಿಗೂ ಟ್ಯಾಬ್ಲೆಟ್‌ ನೀಡಿದರೆ ಎಲ್ಲ ಕೇಂದ್ರಗಳಲ್ಲೂ ಗುಣಮಟ್ಟದ ಸೇವೆ ಒದಗಿಸಲು ಅವಕಾಶವಾಗಲಿದೆ ಎಂದು ತಿಳಿಸಿದರು.

ಒಪ್ಪಂದಕ್ಕೆ ಸಹಿ
ರಾಜ್ಯ ಸರ್ಕಾರ ಹಾಗೂ ಸ್ಯಾಮ್‌ ಸಂಗ್‌ ಇಂಡಿಯಾ ಕಂಪನಿ ಜಂಟಿಯಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಉತ್ತಮವಾಗಿ ನಡೆಸಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿವೆ. ಅದರಂತೆ ಸ್ಯಾಮ್‌ಸಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 1000 ಸ್ಯಾಮ್‌ಸಂಗ್‌ ಐಆರ್‌ಐಎಸ್‌ ಟ್ಯಾಬ್ಲೆಟ್‌ ವಿತರಿಸಿದೆ.

Advertisement

ಟ್ಯಾಬ್ಲೆಟ್‌ ವಿತರಣೆ
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ ಇಂಡಿಯಾ ಸಂಸ್ಥೆ
ಸಹಯೋಗದಲ್ಲಿ 1000 ಕೇಂದ್ರಗಳಿಗೆ ಟ್ಯಾಬ್ಲೆಟ್‌ ವಿತರಣೆಯಾಗಿದೆ. ಪ್ರತಿ ಕೇಂದ್ರದ ತಲಾ ಒಬ್ಬ ಆಶಾ ಕಾರ್ಯಕರ್ತೆ ಹಾಗೂ ಸಹಾಯಕರಿಗೆ ತರಬೇತಿಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ತಿಳಿಸಿದರು. ಅತಿ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪುವ ಪ್ರದೇಶಗಳು ಹಾಗೂ ಮಲೇರಿಯಾ, ಡೆಂ  ಸೇರಿ ಇತರೆ ಸಮಸ್ಯೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಸ್ಥಳಗಳನ್ನು ಗುರುತಿಸಿ ಆ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ
ಟ್ಯಾಬ್ಲೆಟ್‌ಗಳನ್ನು ವಿತರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next