Advertisement

Hydarabad: ಮಾಜಿ ನಕ್ಸಲ್‌ ನಾಯಕ, ಕ್ರಾಂತಿಕಾರಿ ಗೀತೆಗಳಿಗೆ ಹೆಸರಾದ ಗದ್ದರ್‌ ನಿಧನ

09:07 AM Aug 07, 2023 | Team Udayavani |

ಹೈದರಾಬಾದ್‌: ಮಾಜಿ ನಕ್ಸಲ್‌ ನಾಯಕ, ಕ್ರಾಂತಿಕಾರಿ ಹಾಡುಗಾರ ಗದ್ದರ್‌ (77) ಅಲ್ಪಕಾಲದ ಅನಾರೋಗ್ಯದಿಂದ ಹೈದರಾಬಾದ್‌ನಲ್ಲಿ ಭಾನುವಾರ ನಿಧನರಾಗಿದ್ದಾರೆ.

Advertisement

ಗದ್ದರ್‌ ಅವರ ಮೂಲ ಹೆಸರು ಗುಮ್ಮಡಿ ವಿಠಲ ರಾವ್‌. ಜು.20ರಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ಶ್ವಾಸಕೋಶ ಮತ್ತು ಮೂತ್ರಪಿಂಡದ ತೊಂದರೆಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದರ ಜತೆಗೆ ಅವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆ ಇತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಆ.3ರಂದು ಬೈಪಾಸ್‌ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ, ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ.

1980ರಲ್ಲಿ ಅವರು ತಮ್ಮ ಕ್ರಾಂತಿಕಾರಿ ಹಾಡುಗಳಿಂದ ಜನಪ್ರಿಯರಾಗಿದ್ದರು. ಅವರು ಜನನಾಟ್ಯ ಮಂಡಳಿ ಎಂಬ ಸಂಸ್ಥೆಯ ಮೂಲಕ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದರು. ಜತೆಗೆ ಮಾವೋವಾದಿ ನಿಲುವುಗಳಿಂದ ಜನಪ್ರಿಯರಾಗಿದ್ದರು. 2017ರಲ್ಲಿ ಅವರು ಮಾವೋವಾದಿಗಳ ಜತೆಗೆ ತಮ್ಮ ಸಂಪರ್ಕ ಕಡಿದುಕೊಂಡಿದ್ದರು. ಇತ್ತೀಚೆಗಷ್ಟೇ “ಗದ್ದರ್‌ ಪ್ರಜಾ ಪಾರ್ಟಿ’ ಎಂಬ ಪಕ್ಷ ಸ್ಥಾಪಿಸಿದ್ದರು. ವರ್ಷಾಂತ್ಯಕ್ಕೆ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆಯನ್ನೂ ಹೊಂದಿದ್ದರು. ಖಮ್ಮಂನಲ್ಲಿ ಜು.2ರಂದು ರಾಹುಲ್‌ ಗಾಂಧಿ ಉಪಸ್ಥಿತಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಸಭೆಯಲ್ಲಿ ಅವರು ಭಾಗವಹಿಸಿದ್ದರು. ರಾಹುಲ್‌ ಗಾಂಧಿ ಸೇರಿದಂತೆ ಪ್ರಮುಖರು ಗದ್ದರ್‌ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಕಾಶ್ಮೀರದ ಪೂಂಚ್‌ನಲ್ಲಿ ಭಯೋತ್ಪಾದಕನ ಹತ್ಯೆ: ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

Advertisement

Udayavani is now on Telegram. Click here to join our channel and stay updated with the latest news.

Next