ಹೈದರಾಬಾದ್: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿದೆ. ಸಂಭ್ರಮ,ಆಟ ಎಲ್ಲಾ ಸಂದರ್ಭದಲ್ಲೂ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಡುತ್ತಿರುವ ಘಟನೆಗಳು ನಡೆಯುತ್ತಿವೆ. ಇಂಥದ್ದೇ ಮತ್ತೊಂದು ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಶ್ಯಾಮ್ ಯಾದವ್ ಎನ್ನುವ ಯುವಕ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಮುಕೇಶ್ ಅಂಬಾನಿ ಮತ್ತು ಕುಟುಂಬಕ್ಕೆ ದೇಶ, ವಿದೇಶದಲ್ಲೂ ಝಡ್ ಪ್ಲಸ್ ಭದ್ರತೆ ನೀಡಿ: ಸುಪ್ರೀಂ
ಮಂಗಳವಾರ (ಫೆ.28 ರಂದು) ಸಂಜೆ ಶ್ಯಾಮ್ ಯಾದವ್ ಹೈದರಾಬಾದ್‌ನ ಲಾಲಾಪೇಟ್ ನಲ್ಲಿರುವ ಪ್ರೊ.ಜಯಶಂಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದರು. ಈ ವೇಳೆ ಏಕಾಏಕಿ ಏದುಸಿರು ಬಿಡುತ್ತಾ ಕುಸಿದು ಬಿದ್ದಿದ್ದಾರೆ.
ಆಫೀಸ್ ನಿಂದ ಬಂದು ಪ್ರತಿನಿತ್ಯದಂತೆ ಮಂಗಳವಾರ ಕೂಡ ಬ್ಯಾಡ್ಮಿಂಟನ್ ಆಡಲು ಶ್ಯಾಮ್ ಯಾದವ್ ತೆರಳಿದ್ದಾರೆ. ಈ ವೇಳೆ ಆಡುವಾಗಲೇ ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಅವರು ಆದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಇತ್ತೀಚೆಗೆ ಗುಜರಾತ್ ನಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಕ್ರಿಕೆಟ್ ಆಡುವಾಗಲೇ ಮೂವರು ಹೃದಯಾಘಾತವಾಗಿ ಮೃತಪಟ್ಟಿದ್ದರು.