Advertisement

ಕಸ ನಿರ್ವಹಣೆಗೆ ಪಣತೊಟ್ಟ ಟೆಕ್ಕಿ ಏನು ಮಾಡಿದ ಗೊತ್ತಾ?

03:48 PM Aug 18, 2020 | Karthik A |

ಕಸ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳು ಮಾಡಲಾಗುತ್ತಿದ್ದು ಇದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಇದನ್ನು ಮರುಬಳಕೆ ಮಾಡದಿದ್ದರೆ ಮುಂದೊಂದು ಇಡೀ ಜೈವಿಕ ಸಂಕುಲಕ್ಕೆ ತೊಂದರೆಗೀಡು ಮಾಡಲಿದೆ ಎಂಬ ಕನಿಷ್ಠ ಪ್ರಜ್ಞೆ ಇಲ್ಲದೇ ವರ್ತಿಸುತ್ತಿರುವುದು ಶೋಚನೀಯ.

ಇದಕ್ಕೆ ಒಂದೇ ಒಂದು ಪರಿಹಾರ ಎಂದರೆ ತ್ಯಾಜ್ಯದ ಸಮರ್ಪಕ ಮರುಬಳಕೆ. ಇದನ್ನೇ ಬಂಡವಾಳಗಿಸಿಕೊಂಡು ಭೋಪಾಲ್‌ನ ಯುವಕನೋರ್ವ ಮಾದರಿಯಾಗಿದ್ದಾನೆ.

ಕಸದ ತ್ಯಾಜ್ಯವನ್ನು ಸಂಗ್ರಹಿಸಿ ಸಮರ್ಪಕವಾಗಿ ಮರುಬಳಕೆ ಮಾಡುವ ಉದ್ದೇಶದಿಂದ ಭೋಪಾಲ್‌ ಮೂಲದ ಐಟಿ ಎಂಜಿನಿಯರ್‌ ಅನುರಾಗ್‌ ಅಸತಿ ಎಂಬಾಂತ ಕಬಾಡಿವಾಲಾನನ್ನು ಆನ್‌ಲೈನ್‌ ಮುಖೇನ ಪರಿಚಯಿಸಿ ಸುಸ್ಥಿರ ಪರಿಸರ ಬದುಕಿನ ಪಾಠ ಮಾಡಿ, ನಮಗೆಲ್ಲರಿಗೂ ಆದರ್ಶನಾಗಿದ್ದಾನೆ.

ಮನೆಯಲ್ಲಿ ಬಳಕೆ ಮಾಡಿದ ಪತ್ರಿಕೆ, ಗಾಜಿನ ಬಾಟಲಿಗಳು ಮತ್ತು ಬಳಕೆ ಮಾಡಿದ ವಸ್ತುಗಳನ್ನು ನಾವು ಎಲ್ಲೆಂದರಲ್ಲಿ ಎಸೆಯುತ್ತೇವೆ. ಇಲ್ಲವಾದರೆ ಕಬಾಡಿವಾಲಾ ಅವರಿಗೆ ಕೊಡುತ್ತೇವೆ. ಅಷ್ಟಕ್ಕೂ ಕಬಾಡಿವಾಲಾ ಸರಿಯಾದ ಸಮಯಕ್ಕೆ ಬಂದರೆ ಮಾತ್ರ ಅವರಿಗೆ ಕೊಡುತ್ತೇವೆ. ಇಲ್ಲವಾದರೆ ಆ ನಿರುಪಯುಕ್ತ ವಸ್ತುಗಳು ಸೇರುವುದು ತೆಪ್ಪೆಯನ್ನೇ. ಇದು ಮುಂದೆ ತ್ಯಾಜ್ಯವಾಗಿ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತದೆ.

Advertisement

ಈ ಬಗ್ಗೆ ಚಿಂತಿಸಿದ ಅನುರಾಗ್‌ ಅವರು ಕಬಾಡಿವಾಲಾ ಎಂಬ ಆ್ಯಪ್‌ನ್ನು ಅಭಿವೃದ್ಧಿಪಡಿಸಿದನು. ಮುಂದೆ ಕವೀಂದ್ರ ರಘವಂಶಿ ಎಂಬಾತ ಜತೆಯಾದನು. ಯಾರ ಮನೆಯಲ್ಲಿಯಾದರೂ ಕಸದ ತ್ಯಾಜ್ಯ ಇದ್ದರೆ ಈ ಆ್ಯಪ್‌ನ ಮೂಲಕ ನೋಂದಾಯಿಸಿಕೊಂಡರೆ ಸಾಕು, ನೇರವಾಗಿ ಅವರನ್ನು ತಲುಪಿ ಕಸವನ್ನು ಸಂಗ್ರಹಿಸುವುದು ಇವರ ಉದ್ಯಮದ ಯೋಜನೆಯಾಗಿತ್ತು. ಇದರಿಂದ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಪರಿಹಾರ ಸಿಕ್ಕಂತಾಗಿತ್ತು.

ಸಮಸ್ಯೆಯೊಂದು ಉದ್ಯಮಕ್ಕೆ ದಾರಿ ಮಾಡಿತು
ಅನುರಾಗ್‌ ಭೋಪಾಲ್‌ನಲ್ಲಿ ವಾಸಿಸುತ್ತಿರಬೇಕಾದರೆ ಆಗ ತನ್ನ ಕಸವನ್ನು ಕಬಾಡಿವಾಲಾ ನೀಡಲು ಎಲ್ಲಿ ಸಂಪರ್ಕಿಸಿದರೂ ಸಿಗುವುದಿಲ್ಲ. ಪಕ್ಕದ ಮನೆಯವರೂ ಕೂಡ ನಮಗೆ ಪರಿಚಯವಿಲ್ಲದವರಂತೆ ಮಾತನಾಡಿದಾಗ ಆತನಿಗೆ ಹೀಗೆ ಕಸದ ನಿರ್ವಹಣೆ ಮಾಡಲು ಆನ್‌ಲೈನ್‌ ಆ್ಯಪ್‌ ಅಭಿವೃದ್ಧಿ ಮಾಡಿದರೆ ಹೇಗೆ ಯೋಚನೆ ಮೊದಲು ರೂಪುಗೊಳ್ಳುತ್ತದೆ. ಅದರಂತೆ ಕಬಾಡಿವಾಲಾ ಎಂಬ  ಉದ್ಯಮವನ್ನು ಆರಂಭಿಸುತ್ತಾನೆ.
ಸಾಂಪ್ರಾದಾಯಿಕವಾಗಿ ಕಸವನ್ನು ಸಂಗ್ರಹಣೆ ಮಾಡಿದ ಇವರು ಅದನ್ನು ಮರುಬಳಕೆ ಮಾಡುತ್ತಿದ್ದಾರೆ. ಈ ಆ್ಯಪ್‌ ಮೂಲಕ ದಿನಕ್ಕೆ ಸುಮಾರು 100 ಟನ್‌ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ.

ಜನರಿಗೆ ಹತ್ತಿರವಾಗಲು ವಾಟ್ಸಾಪ್‌ ಮೂಲಕ ಸಂಪರ್ಕ
ಕಬಾಡಿವಾಲಾ ಮೊದಲಿಗೆ ಆ್ಯಪ್‌ ಮೂಲಕ ನೋಂದಣಿ ಮಾಡಿಸಿ ಕಸದ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ ಒಮ್ಮೆ ಒಬ್ಬ ಅಜ್ಜಿಗೆ ಆ್ಯಪ್‌ ಉಪಯೋಗಿಸುವುದು ಕಷ್ಟ ಎನಿಸಿದನ್ನು ಗಮನಿಸಿದ ಅನುರಾಗ್‌ ಅವರು ವಾಟ್ಸ್ಯಾಪ್‌ ಮೂಲಕ ಕಸ ಸಂಗ್ರಹಣೆ ನೋಂದಣಿಗೆ ಆರಂಭಿಸುತ್ತಾರೆ. ತರುವಾಯ ನಗರದಲ್ಲಿ ಸುಮಾರು 200ಕ್ಕೂ ಅಧಿಕ ವಾಟ್ಸಾಪ್‌ ತಂಡಗಳನ್ನು ರಚಿಸಲಾಗುತ್ತದೆ. ಇದರಿಂದ ಕಸವನ್ನು ಸಂಗ್ರಹಿಸಲಾಗುತ್ತದೆ.

ಶಿವಸ್ಥಾವರಮಠ, ರಾಯಚೂರು

 

Advertisement

Udayavani is now on Telegram. Click here to join our channel and stay updated with the latest news.

Next