Advertisement

ಶವದೊಂದಿಗೇ ಪೊಲೀಸ್‌ ಠಾಣೆಗೆ ತೆರಳಿದ ಟೆಕ್ಕಿ

12:44 AM Oct 17, 2019 | mahesh |

ಸ್ಯಾನ್‌ಫ್ರಾನ್ಸಿಸ್ಕೊ: ತಾನು ಕೊಲೆ ಮಾಡಿರುವ ವ್ಯಕ್ತಿಯ ಮೃತದೇಹದೊಂದಿಗೆ ಪೊಲೀಸ್‌ ಠಾಣೆಗೆ ತೆರಳಿದ್ದಲ್ಲದೆ, ತಾನು ಮಾಡಿರುವ 4 ಕೊಲೆಗಳ ಬಗ್ಗೆ ಮಾಹಿತಿ ನೀಡಿರುವ 53 ವರ್ಷ ವಯಸ್ಸಿನ ಭಾರತೀಯ ಮೂಲದ ಐಟಿ ಉದ್ಯೋಗಿ ಶಂಕರ್‌ ನಾಗಪ್ಪ ಹುನಗೋಡು ಅವನನ್ನು ಅಮೆರಿಕ ದಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಹುನಗೋಡು, 350 ಕಿ.ಮೀ. ಕಾರಿನಲ್ಲಿ ಕ್ರಮಿಸಿ ಕ್ಯಾಲಿಫೋರ್ನಿಯಾದ ಮೌಂಟ್‌ ಶಸ್ತ ಪೊಲೀಸ್‌ ಠಾಣೆಗೆ ತೆರಳಿ, ತಾನು ತನ್ನ ಅಪಾರ್ಟ್‌ಮೆಂಟ್‌ನಲ್ಲಿ 4 ಕೊಲೆಗಳನ್ನು ಮಾಡಿದ್ದು, ತನ್ನ ಕಾರಿನಲ್ಲಿ ಮೃತದೇಹ ವೊಂದನ್ನು ತಂದಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ.

ಆರೋಪಿ ಶಂಕರ್‌ರನ್ನು ವಶಕ್ಕೆ ತೆಗೆದುಕೊಂಡು ಆತನ ಅಪಾರ್ಟ್‌ಮೆಂಟನ್ನು ಪರಿಶೀಲಿಸಲಾಗಿದೆ. ಅಲ್ಲಿ ಇಬ್ಬರು ವಯಸ್ಕರು ಮತ್ತು ಮಕ್ಕಳ ಮೃತದೇಹ ಪತ್ತೆಯಾಗಿದೆ. ಇದು ಶಂಕರ್‌ನ ಕುಟುಂಬ ಸದಸ್ಯರದ್ದೇ ಇರಬಹುದು ಎಂಬ ಶಂಕೆ ಯಿದ್ದು, ಅವರ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next