Advertisement
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾ ಗೋಪಿನಾಥ್ ಅವರ ತಂಡ ಮೊದಲು ಆರೋಪಿ ತೇಜ್‌ರಾಜ್ ಇದ್ದ ಎಸ್.ಎಸ್.ಪುರಂ ನಲ್ಲಿರುವ ಮನೆಯನ್ನು ಪರಿಶೀಲಿಸಿದಾಗ ನೆರೆಹೊರೆಯವಿರಿಗೆ ಆತನ ಕುರಿತು ಮಾಹಿತಿಯೇ ಇರಲಿಲ್ಲ. ಈತ ಮೂಲತಃ ರಾಜಸ್ಥಾನದವನಾಗಿದ್ದು ಕಳೆದ 20ವರ್ಷಗಳ ಹಿಂದೆ ತುಮಕೂರಿಗೆ ಬಂದು ನೆಲೆಸಿದ್ದ ಇಲ್ಲಿಯ ಸರ್ಕಾರಿ ಕಚೇರಿಗಳಿಗೆ ಪೀಠೊಪಕರಣಗಳನ್ನು ಸರಬರಾಜು ಮಾಡುವ ಗುತ್ತಿಗೆ ಕೆಲಸವನ್ನು ಮಾಡುತ್ತಿದ್ದ ಎನ್ನುವ ಮಾಹಿತಿ ಸದ್ಯಕ್ಕೆ ದೊರೆತಿದೆ.
ಉತ್ತಮ ಬಾಂಧವ್ಯ: ಲೋಕಾಯುಕ್ತ ನ್ಯಾಯಮೂರ್ತಿ ಅವರಿಗೆ ಚಾಕುವಿನಿಂದ ಇರಿದ ವ್ಯಕ್ತಿ ತುಮಕೂರಿನವನು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆತ ವಾಸವಿದ್ದ ಎರಡು ಕಡೆಯ ಕೊಠಡಿಗಳನ್ನು ತಮ್ಮ ವಶಕ್ಕೆ ಪಡೆಯಲಾಗಿದೆ. ಈತನ ಸಹೋದರ ತುಮಕೂರು ವಾಸಿ ಎಂದು ತಿಳಿದು ಬಂದಿದೆ ಆತನನ್ನು ಪತ್ತೆ ಮಾಡುತ್ತೇವೆ. ಈತ ಯಾರೊಂದಿಗೂ ಉತ್ತಮ ಬಾಂಧವ್ಯ ಹೊಂದಿಲ್ಲ. ಈತ ಫರ್ನೇಚರ್ ಏಜೆನ್ಸಿ ಮಾಡಿಕೊಂಡಿದ್ದ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾ ವಿ ಗೋಪಿನಾಥ್ ತಿಳಿಸಿದ್ದಾರೆ.