Advertisement
Related Articles
Advertisement
ತೇಜಸ್ ಅವರು ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಸಮೂಹದಲ್ಲಿ ನೆಲೆಸಿರುವ ಕೊಂಕಣ, ಸತಾರ, ಕೊಲ್ಲಾಪುರ ಮತ್ತು ಅಹ್ಮದ್‌ನಗರ ಪ್ರದೇಶಗಳಲ್ಲಿ ಏಡಿಗಳ ಹೊಸ ಪ್ರಭೇದಗಳನ್ನು ಪತ್ತೆಮಾಡಿದ್ದಾರೆ. ತೇಜಸ್ ಅವರಿಗೆ ಈ ಕೆಲಸದಲ್ಲಿ ಅವರ ಇಬ್ಬರು ಸಂಗಡಿಗರುಗಳಾದ ಡಾ| ಸಮೀರ್ ಕುಮಾರ್ ಪಾಟೀಲ್ ಮತ್ತು ಅನೀಲ್ ಖರೆ ಅವರು ಜೊತೆ ನೀಡಿದ್ದರು.
ಡಾ| ಎಸ್. ಕೆ. ಪಾಟೀಲ್ ಅವರು ಭಾರತೀಯ ಪ್ರಾಣಿವಿಜ್ಞಾನ ಸರ್ವೇಕ್ಷಣಾ ಇಲಾಖೆಗೆ ಸಂಬಂಧಪಟ್ಟವರಾಗಿದ್ದಾರೆ. ಇವರು ತೇಜಸ್‌ಗೆ ಸಂಶೋಧನಾ ದಾಖಲೆಗಳನ್ನು ಬರೆಯಲು ಸಹಾಯ ಮಾಡಿದ್ದರು. 2015 ಮತ್ತು 2017ರ ಅವಧಿಯಲ್ಲಿ ಈ ಸಂಶೋಧನೆ ನಡೆದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಜೀವವೈವಧ್ಯತೆಯಿಂದ ಕೂಡಿದ್ದು, ಸಸ್ಯ ಮತ್ತು ಪ್ರಾಣಿಗಳ ಸಾವಿರಾರು ಪ್ರಭೇದಗಳು ಅಲ್ಲಿವೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸಂಶೋಧಕರು ವನ್ಯಜೀವಿಗಳು ಹಲವು ಬಗೆಯ ಪ್ರಭೇದಗಳನ್ನು ಇಲ್ಲಿ ಪತ್ತೆಮಾಡಿದ್ದಾರೆ.
2015ರ ಜುಲೈನಿಂದ ತೇಜಸ್ ಅವರು ಏಡಿಯ ಹೊಸ ಪ್ರಭೇದವನ್ನು ಹುಡುಕುವ ಕೆಲಸವನ್ನು ಆರಂಭಿಸಿದ್ದರು. ಇದಕ್ಕಾಗಿ ಅವರಿಗೆ ಹಲವು ತಿಂಗಳು ಕೊಂಕಣದಲ್ಲಿ ನೆಲೆಸಿದ್ದರು. ಇಷ್ಟೇ ಅಲ್ಲದೆ, ಅವರು ತಮ್ಮ ಸಂಶೋಧನೆ ಕೆಲಸಕ್ಕಾಗಿ ಹೆಚ್ಚಿನ ದಿನಗಳವರೆಗೆ ದಟ್ಟ ಕಾಡುಗಳಲ್ಲಿ ಜಿಗಣೆ ಮತ್ತು ವಿಷಪೂರಿತ ಹಾವುಗಳ ನಡುವೆ ಉಳಿದ್ದಿದ್ದರು. ಮಳೆಗಾಲದ ಸಮಯದಲ್ಲಿ ಕ್ಯಾಮೆರಾ ಮತ್ತು ಇತರ ಉಪಕರಣಗಳನ್ನು ಮಳೆನೀರಿನಿಂದ ರಕ್ಷಿಸುವುದು ತೇಜಸ್ ಅವರ ಮುಂದೆ ಸವಾಲಾಗಿತ್ತು. ಎಲ್ಲಕ್ಕೂ ಮೊದಲಾಗಿ ಅವರು ಸರೀಸೃಪಗಳು ಮತ್ತು ಉಭಯಚರಗಳ ಮೇಲೆ ಸಂಶೋಧನೆಯನ್ನು ಪ್ರಾರಂಭಿಸಿದ್ದರು. ಏಡಿಗಳನ್ನು ಪತ್ತೆಹಚ್ಚುವ, ಅವುಗಳ ಫೋಟೋ ತೆಗೆಯುವ ಹಾಗೂ ಅವುಗಳ ಮಾದರಿಗಳನ್ನು ಸಂಗ್ರಹಿಸುವ ಕೆಲಸವನ್ನು ಕೇವಲ ತೇಜಸ್ ಅವರೇ ಮಾಡಿದ್ದರು. ತಂಡದ ಇತರ ಸದಸ್ಯರು ಶೋಧಿಸಲ್ಪಟ್ಟ ಪ್ರಭೇದಗಳಿಗೆ ಹೆಸರು ಸೂಚಿಸುವುದರಿಂದ ಹಿಡಿದು ಅವುಗಳ ಬಗ್ಗೆ ಬರೆಯುವ ಕೆಲಸ ಮಾಡಿದ್ದರು.
ಈ ಸಂಪೂರ್ಣ ಯೋಜನೆ ನನ್ನ ಫೀಲ್ಡ್ ಟೀಮ್‌ನ ಕಠಿನ ಪರಿಶ್ರಮದ ಫಲಿತಾಂಶವಾಗಿದೆ. ಈ ಸಂಶೋಧನೆಗಾಗಿ ನಮಗೆ ಪರವಾನಿಗೆಯನ್ನು ನೀಡಿದ್ದಕ್ಕಾಗಿ ನಾಮ ಮಹಾರಾಷ್ಟ್ರ ರಾಜ್ಯ ಅರಣ್ಯ ಇಲಾಖೆಯವರಿಗೆ ಧನ್ಯವಾದ ಹೇಳುತ್ತೇನೆ ಎಂದು ತೇಜಸ್ ನುಡಿದಿದ್ದಾರೆ. ತೇಜಸ್ ಅವರಿಗೆ ರಾಜಕೀಯದಲ್ಲಿ ಸೇರುವ ಯಾವುದೇ ಯೋಜನೆಗಳು ಇಲ್ಲವಂತೆ.