Advertisement
ತೇಜಸ್‌ನ “ತೇಜಸ್-ಎನ್’ ಸುಧಾರಿತ ಆವೃತ್ತಿ ಯನ್ನು ನಿರ್ಮಿಸಲು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಮುಂದಾಗಿದೆ. ಡಬಲ್ ಎಂಜಿನ್ ಹೊಂದಿರುವ ಇದರ ತಯಾರಿಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಮೇ 22ರಂದು ನಡೆದ ವಾಯು ಮತ್ತು ನೌಕಾದಳ ಮುಖ್ಯಸ್ಥರ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರು.
“ಆತ್ಮನಿರ್ಭರ ಭಾರತ’ ಯೋಜನೆಯಡಿಯ ಮೊದಲ ಯುದ್ಧ ವಿಮಾನ ತೇಜಸ್ ಸಂಪೂರ್ಣ ಸ್ವದೇಶೀ ತಾಂತ್ರಿಕ ಉಪಕರಣ ಹೊಂದಿರುತ್ತದೆ ಎಂದು ಎಡಿಎ ಸ್ಪಷ್ಟಪಡಿಸಿದೆ. ಅವಳಿ ಎಂಜಿನ್‌ಗಳು ಇರಲಿದ್ದು, ಆರು ಏರ್ ಟು ಏರ್ ಕ್ಷಿಪಣಿಗಳನ್ನು ಹೊತ್ತೂಯ್ಯುವಷ್ಟು ಸಮರ್ಥವಾಗಿರಲಿದೆ.
ಈಗಾಗಲೇ ವಾಯು ಸೇನೆಯ ಭಾಗ ವಾಗಿರುವ ಸುಧಾರಿತ ಹಗುರ ಯುದ್ಧ ವಿಮಾನ (ಎಎಂಸಿಎ)ಕ್ಕಿಂತ ಸುಧಾರಿತ ತಂತ್ರಜ್ಞಾನದೊಂದಿಗೆ ತೇಜಸ್- ಎನ್ ರೂಪು ತಳೆಯಲಿದೆ. ಸಾಗರದಲ್ಲಿ ಸಮರ ಕಾರ್ಯಾಚರಣೆಗೆ ತಕ್ಕಂತೆ ಮಾರ್ಪಾಡಾಗಲಿದ್ದು, ಐಎನ್‌ಎಸ್ ವಿಕ್ರಮಾದಿತ್ಯ ಜತೆಗೆ ಐಎನ್‌ಎಸ್ ವಿಕ್ರಾಂತ್ ಮೇಲಿಂದಲೂ ಹಾರಾಟ ನಡೆಸಲಿದೆ.
Related Articles
ಕಳೆದ ಜನವರಿಯಲ್ಲಿ ಐಎನ್‌ಎಸ್ ವಿಕ್ರಮಾದಿತ್ಯ ಮೇಲೆ “ತೇಜಸ್-ಎನ್’ ಪ್ರಯೋಗ ಮಾದರಿ ಯನ್ನು ಯಶಸ್ವಿ ಲ್ಯಾಂಡಿಂಗ್ ಮಾಡಿತ್ತು. 244 ಕಿ.ಮೀ. ವೇಗದಲ್ಲಿ ಹಾರಿ ಬಂದ ಅದು ಕಿರು ರನ್‌ವೇಯಲ್ಲಿ ಸುರಕ್ಷಿತವಾಗಿ ನಿಲುಗಡೆಗೊಂಡಿತ್ತು.
Advertisement
ತೇಜಸ್-ಎನ್ ಫೈಟರ್ ವಿಶೇಷ-ನಿರಂತರ 2 ತಾಸು ಕಾರ್ಯಾಚರಣೆ ಸಾಮರ್ಥ್ಯ
-244 ಕಿ.ಮೀ. ವೇಗದಲ್ಲಿ ಲ್ಯಾಂಡಿಂಗ್
-ಏರ್ ಟು ಏರ್ 6 ಕ್ಷಿಪಣಿ ಪ್ರಯೋಗ
-ವಿನ್ಯಾಸದಲ್ಲಿ ಎಂಎಸಿಎಗಿಂತ 3 ಕನಿಷ್ಠ ಮಾರ್ಪಾಡು
-ಕಂಪ್ಯುಟೇಶನಲ್ ಫೂಯಿಡ್ ಡೈನಾಮಿಕ್ಸ್ (ಸಿಎಫ್ಡಿ) ಪರೀಕ್ಷೆಗೆ ಅನುಗುಣವಾಗಿ, ವಿಂಡ್ ಟನೆಲ್ ಆಕಾರ.