Advertisement

ಅತ್ಯಾಧುನಿಕಗೊಂಡಿದೆ “ತೇಜಸ್‌ ಎಕ್ಸ್‌ಪ್ರೆಸ್‌’ರೈಲು

12:15 AM Feb 26, 2023 | Team Udayavani |

ಮುಂಬಯಿ: ಭಾರತದ ಎರಡನೇ ಖಾಸಗಿ ರೈಲು ತೇಜಸ್‌ ಎಕ್ಸ್‌ಪ್ರೆಸ್‌, ಅಹ್ಮದಾಬಾದ್‌-ಮುಂಬಯಿ ನಡುವೆ ಈಗಾಗಲೇ ಸಂಚಾರ ಆರಂಭಿಸಿದೆ. ಈ ರೈಲು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಅಂತಾರಾಷ್ಟ್ರೀಯ ವಿಮಾನ ದಲ್ಲಿರುವ ಅನುಭವ ನೀಡುತ್ತದೆ. ಈ ರೈಲಿನ ಒಳಾವರಣದ ಚಿತ್ರಗಳನ್ನು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

ತೇಜಸ್‌ ಎಕ್ಸ್‌ ಪ್ರಸ್‌ನ ಮೊದಲ ರೈಲು ಕಳೆದ ವರ್ಷ ಹೊಸದಿಲ್ಲಿ ಮತ್ತು ಲಕ್ನೋ ನಡುವೆ ಸಂಚಾರ ಆರಂಭಿಸಿತ್ತು.

ಉದ್ಯಮಿಗಳನ್ನು ಗುರಿಯಾಟ್ಟುಕೊಂಡು ಜ.17ರಂದು ಅಹ್ಮದಾಬಾದ್‌ ಮತ್ತು ಮುಂಬಯಿ ನಡುವೆ ತೇಜಸ್‌ ರೈಲುಗಳನ್ನು ಪರಿಚಯಿಸಲಾಗಿದೆ. ರೈಲಿನ ಎಕ್ಸಿಕ್ಯುಟಿವ್‌ ಚೇರ್‌ ಕಾರ್‌ ಕೋಚ್‌ಗಳ ಪ್ರತೀ ಆಸನದಲ್ಲಿ ಎಲ್‌ಇಡಿ ಸ್ಕ್ರೀನ್‌ ಇದೆ. ಇದು ಮನೋರಂಜನೆ ಮತ್ತು ಮಾಹಿತಿ ಎರಡನ್ನೂ ಒದಗಿಸಲಿದೆ.


ಅಲ್ಲದೇ ಬಟನ್‌-ಚಾಲಿತ ಕಿಟಕಿ ಪರದೆಗಳು ಮತ್ತು ಅಗಲವಾದ ಗಾಜಿನ ಲಗೇಜ್‌ ರ್ಯಾಕ್‌ಗಳನ್ನು ಹೊಂದಿದೆ. ರೈಲು ಜೈವಿಕ ಶೌಚಾಲಯ, ಅತ್ಯಾಧುನಿಕ ಮತ್ತು ಆರೋಗ್ಯಕರ ಸೌಲಭ್ಯ ಒಳಗೊಂಡಿದೆ. ಆಟೊಮ್ಯಾಟಿಕ್‌ ಬಾಗಿಲುಗಳು, ಕೋಚ್‌ಗಳ ನಡುವೆ ಪರಸ್ಪರ ಸಂಪರ್ಕಿಸುವ ಸ್ಲೆಡ್ಡಿಂಗ್ ಡೋರ್‌ಗಳನ್ನು ಹೊಂದಿದೆ. ಒಟ್ಟಾರೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಐಷಾರಾಮಿ ಅನುಭವವನ್ನು ಪ್ರಯಾಣಿಕರಿಗೆ ಒದಗಿಸಲಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next