ಕನಕಪುರ: ಘೋಷಣೆಗೆ ಮಾತ್ರ ಸೀಮಿತವಾಗಿದ್ದ ಹಾರೋಹಳ್ಳಿ ತಾಲೂಕು ಕೇಂದ್ರದ ಆರಂಭದ ಆಡಳಿ ತಾತ್ಮಕ ಕಾರ್ಯಚಟುವಟಿಕೆಗೆ 12 ಅಧಿಕಾರಿ, ಸಿಬ್ಬಂದಿಹುದ್ದೆಗಳನ್ನು ಸೃಜಿಸಲು ಸರ್ಕಾರ ತಿರ್ಮಾನಿಸಿ ಆದೇಶಿಸಿದೆ.
ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ನೆನೆಗುದಿಗೆ ಬಿದ್ದಿದ್ದ ಹಾರೋಹಳ್ಳಿ ತಾಲೂಕು ಕೇಂದ್ರದ ಆಡಳಿತಾತ್ಮಕ ಕಾರ್ಯಚಟುವಿಕೆ ಪ್ರಾರಂಭಿಸಲು ಅನುಕೂಲ ಆಗುವಂತೆ ತಹಶೀಲ್ದಾರ್ ಕಚೇರಿಗೆ ಒಟ್ಟು 12 ಹುದ್ದೆ ಗಳನ್ನು ಸೃಜಿಸಲು ಮುಂದಾಗಿದೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ 2019-20 ಸಾಲಿನ ಬಜೆಟ್‌ನಲ್ಲಿ ಹಾರೋಹಳ್ಳಿಯನ್ನು ನೂತನ ತಾಲೂಕು ಕೇಂದ್ರವಾಗಿ ರಚಿಸಲು ಘೋಷಣೆ ಮಾಡಿದ್ದರು. ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೆ ಹಾರೋಹಳ್ಳಿ ತಾಲೂಕು ರಚನೆ ಘೋಷಣೆ ಕಡತಕ್ಕೆ ಮಾತ್ರ ಸೀಮಿತವಾಗಿತ್ತು. ಬಿಜೆಪಿ ಸರ್ಕಾರ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಅಸ್ತಿತ್ವಕ್ಕೆ ತರಲು ಅಧಿಕೃತವಾಗಿ ರಾಜ್ಯಪತ್ರ ಹೊರಡಿಸಿತ್ತು.
ಈಗ ಮತ್ತೂಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ ಸರ್ಕಾರ, ಆಡಳಿತಾತ್ಮಕ ದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಹಾರೋಹಳ್ಳಿ ತಾಲೂಕು ಕೇಂದ್ರ ಕಾರ್ಯಾರಂಭಕ್ಕೆ ತಹಶೀಲ್ದಾರ್ ಕಚೇರಿಗೆ ಹುದ್ದೆ ಸೃಜಿಸಲು ಮುಂದಾಗಿದೆ.
ತಹಶೀಲ್ದಾರ್ ಕಚೇರಿ ಹುದ್ದೆಗಳು: ಹಾರೋಹಳ್ಳಿ ತಾಲೂಕು ಕೇಂದ್ರಕ್ಕೆ ಕಾರ್ಯಾರಂಭಕ್ಕೆ ಅಗತ್ಯವಿರುವತಹಶೀಲ್ದಾರ್(ಗ್ರೇಡ್1), ಶಿರಸ್ತೇದಾರ್(1), ಪ್ರಥಮ ದರ್ಜೆ ಸಹಾಯಕ(2), ಆಹಾರ ನಿರೀಕ್ಷಕ(1), ದ್ವಿತೀಯ ದರ್ಜೆ ಸಹಾಯಕ(3), ಹೊರಗುತ್ತಿಗೆ ಆಧಾರದ ಮೇಲೆ ಬೆರಳಚ್ಚುಗಾರ(1), ಗ್ರೂಪ್ ಡಿ(2), ವಾಹನ ಚಾಲಕ(1) ಸೇರಿದಂತೆ ಒಟ್ಟು 12 ಹುದ್ದೆ ಸೃಜಿಸಲು ಸರ್ಕಾರ ತಿರ್ಮಾನಿಸಿದೆ.
ಉಸ್ತುವಾರಿ ಸಚಿವರ ಸಭೆ: ಹಾರೋಹಳ್ಳಿ ತಾಲೂಕು ಕೇಂದ್ರವನವನ್ನಾಗಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ತರಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥನಾರಾಯಣ್ ಕಳೆದ ಡಿ. 9ರಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡು ತಾಲೂಕಿಗೆ ಅಗತ್ಯವಾದ ಮೂಲಸೌಕರ್ಯ ಕಟ್ಟಡ ಒದಗಿಸಿ ಕೊಟ್ಟು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ತಿರ್ಮಾನಿಸಲಾಗಿತ್ತು.
ಉಸ್ತುವಾರಿ ಸಚಿವರು ಸಭೆ ನಡೆಸಿದ ಬೆನ್ನಲ್ಲೇ ಸರ್ಕಾರ ತಹಶೀಲ್ದಾರ್ ಕಚೇರಿ ಹುದ್ದೆ ಸೃಜಿಸಿದೆ. ಆ ಹುದ್ದೆಗಳಿಗೆಅಧಿಕಾರಿಗಳನ್ನು ನಿಯುಕ್ತಿಗೊಳಿಸಿ, ಆದಷ್ಟು ಬೇಗತಾಲೂಕು ಆಡಳಿತಾತ್ಮಕ ಕಾರ್ಯಚಟುವಟಿಕೆ ಕಾರ್ಯಾರಂಭ ಮಾಡಬೇಕು ಎಂಬುದು ಸಾರ್ವಜನಿಕರಒತ್ತಾಯವಾಗಿದೆ.