Advertisement

ಚೇಳೂರಿನಲ್ಲಿ ತಹಶೀಲ್ದಾರ್‌ ಕಚೇರಿ

07:27 PM Sep 24, 2022 | Team Udayavani |

ಚೇಳೂರು: ನೂತನ ತಾಲೂಕಾದ ಚೇಳೂರು ರಚನೆಯಾಗಿರುವ ತಾಲೂಕು ಕೇಂದ್ರದಲ್ಲಿ ತಹಶೀಲ್ದಾರ್‌ ಕಚೇರಿಯನ್ನು ಪ್ರಾರಂಬಿಸಲು ಬಾಗೇಪಲ್ಲಿ ತಹಶೀಲ್ದಾರ್‌ ವೈ.ರವಿ ನೇತೃತ್ವದಲ್ಲಿ ಗ್ರಾಮದ ವಿವಿಧ ಸರ್ಕಾರಿ ಕಟ್ಟಡಗಳು ಖಾಸಗಿ ಕಟ್ಟಡಗಳನ್ನು ಪರಿಶೀಲಿಸಿದರು.

Advertisement

ಬಳಿಕ ಮಾತನಾಡಿ, ತಾಲೂಕಿನಲ್ಲಿ ತಹಶೀಲ್ದಾರ್‌ ಕಚೇರಿಯನ್ನು ಪ್ರಾರಂಭ ಮಾಡಲು ಅಗತ್ಯ ಸಂಖ್ಯೆಯಲ್ಲಿ ಹುದ್ದೆಗಳನ್ನು ಮಂಜೂರು ಮಾಡಿದೆ. ಚೇಳೂರು ಸರಕಾರಿ ಕಚೇರಿಗಳಿಗೆ ಷೇರ್‌ ಖಾನ್‌ ಕೋಟೆ ಸ.ನಂ. 47 ರಲ್ಲಿ 9-10 ಕುಂಟೆ ಜಮೀನು ಗುರುತಿಸಿ ಸರಕಾರಕ್ಕೆ ವರದಿ ನೀಡಿದ್ದು ಜಮೀನಿಗೆ ಅಳತೆ ಮಾಡಿಸಿ ಬೇಲಿ ಹಾಕಲಾಗುವುದು ಎಂದರು.

ಚೇಳೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಮಾತನಾಡಿದರು. 40 ಕಿ.ಮೀ.ದೂರದ ಬಾಗೇಪಲ್ಲಿ ತಾಲೂಕು ಕಚೇರಿಗಳಿಗೆ ಜಾತಿ ಪತ್ರ. ಮತ್ತಿತರೆ ಕೆಲಸಗಳಿಗೆ ಹೋಗಿ ಬರುವ ಭಾದೆ ತಪ್ಪುತ್ತದೆ ಎಂದರು. ಬಾಗೇಪಲ್ಲಿ ಗ್ರೇಡ್‌-2 ತಹಶೀಲ್ದಾರ್‌ ವಿ.ಸುಬ್ರಮಣಿ, ನಾಡಕಚೇರಿಯ ರವಿಶಂಕರ್‌, ವಿ.ಶ್ರೀನಿವಾಸ್‌, ವೈ. ವೆಂಕಟೇಶ್‌, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯ ಪಿ.ರಾಧಾಕೃಷ್ಣಾ, ಗುನ್ನಾಪಾಪರೆಡ್ಡಿ, ಪೇಪರ್‌ ಜೆ.ವಿ.ಚಲಪತಿ, ಪಿ.ಎನ್‌.ಆಂಜನೇಯರೆಡ್ಡಿ, ವೈ.ಶಂಕರಪ್ಪ, ಟಿ.ಎನ್‌.ಸೀನಪ್ಪ, ದರಖಾಸ್ತ ಸಮಿತಿ ಸದಸ್ಯ ವೈ.ಚಂದ್ರ, ರೈತಸಂಘದ ತಾಲೂಕು ಅಧ್ಯಕ್ಷ ಕೆ.ಎನ್‌.ಸೋಮಶೇಖರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next