Advertisement

ತೀಯಾ ಸಮಾಜ ಯುಎಇ: ವಾರ್ಷಿಕ ರಕ್ತದಾನ ಶಿಬಿರ  

11:47 AM Oct 03, 2017 | |

 ಮುಂಬಯಿ: ಕಳೆದ ಹದಿಮೂರು ವರ್ಷಗಳಿಂದ ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ ಕ್ರೀಯಾಶೀಲರಾಗಿರುವ ತೀಯಾ ಸಮುದಾಯದ ಏಕೈಕ ಸಾಗರೋತ್ತರ ಸಂಘಟನೆ ದುಬಾಯಿಯ ತೀಯಾ ಸಮಾಜ ಯುಎಇ ವತಿಯಿಂದ ವಾರ್ಷಿಕ ರಕ್ತದಾನ ಶಿಬಿರವು ಸೆ. 8 ರಂದು ನಡೆಯಿತು.

Advertisement

ದುಬಾಯಿಯ ಲತೀಫಾ ಆಸ್ಪತ್ರೆಯಲ್ಲಿ ಸಮಾ ಜದ ಅಧ್ಯಕ್ಷರಾದ ಮನೀಷ್‌  ಕರ್ಕೇರ ಮತ್ತು ಉಪಾಧ್ಯಕ್ಷ ಧರ್ಮೇಂದ್ರ ಬಂಗೇರ ಇವರ ನೇತೃ ತ್ವದಲ್ಲಿ ನಡೆದ ಶಿಬಿರದಲ್ಲಿ ತೀಯಾ ಸಮಾಜದ 80 ಕ್ಕಿಂತಲೂ ಅಧಿಕ ಸದಸ್ಯರು ಈ ಶಿಬಿರದಲ್ಲಿ ಭಾಗವಹಿಸಿ ರಕ್ತದಾನಗೈದರು.

ಪ್ರಧಾನ ಕಾರ್ಯದರ್ಶಿ ಅಮರ್‌ ಉಮೇಶ್‌ ಅವರು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಜಗದೀಶ್‌ ಹಾಗೂ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಶಿಬಿರದ ಯಶಸ್ಸಿಗೆ ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next