ಮುಂಬಯಿ: ತೀಯಾ ಸಮಾಜ ಮುಂಬಯಿ ವತಿಯಿಂದ ಪೂರ್ವ ವಲಯ ಪ್ರಾದೇಶಿಕ ಸಮಿತಿಯ ಸಹಯೋಗದೊಂದಿಗೆ ದಶವಾರ್ಷಿಕ ನವರಾತ್ರಿ ಪೂಜಾ ಮಹೋತ್ಸವವು ಸೆ. 28ರಂದು ಸಂಜೆ ಕಾಂಜೂರ್‌ಮಾರ್ಗ್ ಪಶ್ಚಿಮದ ಉಮಾ ಮಾಲ್‌ನ ಅವಿಷ್ಕಾರ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೆರವೇರಿತು.
ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ್ ಆರ್. ಬೆಳ್ಚಡ ಅವರ ಮಾರ್ಗದರ್ಶನ ಮತ್ತು ಸಾರಥ್ಯದಲ್ಲಿ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಜೆ ಶಿಬರೂರು ಸುರೇಶ್ ಎಲ್. ಶೆಟ್ಟಿ ನಿರ್ದೇಶನದಲ್ಲಿ ಶ್ರೀ ಮಣಿಕಂಠ ಭಕ್ತ ವೃಂದದ ಭಜನ ಸಂಧ್ಯಾ ಕಾರ್ಯಕ್ರಮ ನಡೆಯಿತು. ಬಳಿಕ ದುರ್ಗಾಷ್ಟಮಿ ಪೂಜೆ, ದುರ್ಗಾರಾಧನೆ ಇತ್ಯಾದಿ ಪೂಜಾದಿಗಳು ನಡೆದವು. ವಿದ್ವಾನ್ ರಾಮಚಂದ್ರ ಭಟ್ ಮತ್ತು ರವಿಚಂದ್ರ ಭಟ್ ತನ್ನ ಪೌರೋಹಿತ್ಯದಲ್ಲಿ ಪೂಜೆ ನೆರವೇರಿತು.
ಪೂರ್ವ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಬಿ. ಎಂ. ಮತ್ತು ಹೇಮಾವತಿ ಮೋಹನ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಬಳಿಕ ದಾಂಡಿಯಾ ರಾಸ್ ನಡೆದಿದ್ದು ಬಹುತೇಕ ತೀಯಾ ಬಂಧುಗಳು, ಮಕ್ಕಳು, ಯುವಕ-ಯುವತಿಯರು, ಹಿರಿಯ ನಾಗರಿಕರು ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡರು. ಕೊನೆಯಲ್ಲಿ ಮಂಗಳಾರತಿ ನೆರವೇರಿತು.
ವಿಶ್ವಸ್ತ ಸದಸ್ಯ ಅಪುಂಞಿ ಕೆ. ಬಂಗೇರ, ಸಂಸ್ಥೆಯ ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಗೌರವ ಪ್ರಧಾನ ಕಾರ್ಯದರ್ಶಿ ಈಶ್ವರ್ ಎಂ. ಐಲ್, ಗೌರವ ಕೋಶಾಧಿಕಾರಿ ರಮೇಶ್ ಎನ್. ಉಳ್ಳಾಲ್, ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್. ಸುವರ್ಣ, ಮಾಜಿ ಕಾರ್ಯದರ್ಶಿ ಐಲ್ ಬಾಬು, ಪಶ್ಚಿಮ ವಲಯದ ಮಹಿಳಾಧ್ಯಕ್ಷೆ ಲತಾ ಉಳ್ಳಾಲ್, ಪೂರ್ವ ವಲಯದ ಮಹಿಳಾಧ್ಯಕ್ಷೆ ಪದ್ಮಿನಿ ಕೆ. ಕೋಟೆಕರ್, ಆರೋಗ್ಯನಿಧಿ ಕಾರ್ಯಾಧ್ಯಕ್ಷೆ ದಿವ್ಯಾ ಆರ್. ಕೋಟ್ಯಾನ್, ಪೂರ್ವ ವಲಯದ ಕೋಶಾಧಿಕಾರಿ ನಿತ್ಯೋದಯ ಉಳ್ಳಾಲ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಹರ್ಷದ್ ಸಿ. ಕರ್ಕೇರ, ಸುರೇಶ್ ಬಂಗೇರ, ನಾರಾಯಣ ಸಾಲ್ಯಾನ್, ರಾಮಚಂದ್ರ ಕೋಟ್ಯಾನ್ ಜೋಗೇಶ್ವರಿ, ಗಂಗಾಧರ್ ಕಲ್ಲಾಡಿ, ಕೆ. ಬಿ. ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್