Advertisement
ಮಾರ್ಟಾ ಕೊಸ್ಟುéಕ್ 1996ರ ಬಳಿಕ ಮೆಲ್ಬರ್ನ್ ಕೂಟದ 3ನೇ ಸುತ್ತಿಗೆ ಬಂದ ಕಿರಿಯ ಆಟಗಾರ್ತಿ ಎನಿಸಿದ್ದರು. “ಆಕೆಗೆ ಖಂಡಿತವಾಗಿಯೂ ಉಜ್ವಲ ಭವಿಷ್ಯವಿದೆ’ ಎಂದು ಸ್ವಿಟೋಲಿನಾ ಹಾರೈಸಿದರೆ, “ತೃತೀಯ ಸುತ್ತಿಗೆ ಏರಿದ್ದು ನನ್ನ ಪಾಲಿಗೆ ನಿಜಕ್ಕೂ ವಿಶೇಷ’ ಎಂದು ಕೊಸ್ಟುéಕ್ ಪ್ರತಿಕ್ರಿಯಿಸಿದರು.
ಕಳೆದ ವರ್ಷದ ಫ್ರೆಂಚ್ ಓಪನ್ ಚಾಂಪಿಯನ್, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರ ಸೋಲು ಶುಕ್ರವಾರದ ಅಚ್ಚರಿ ಎನಿಸಿತು. ಒಸ್ಟಾಪೆಂಕೊ ಅವರನ್ನು ಎಸ್ತೋನಿಯಾದ ಅನೆಟ್ ಕೊಂಟವೀಟ್ 6-3, 1-6, 6-3 ಅಂತರದಿಂದ ಕೆಡವಿದರು.
ಸ್ಲೊವಾಕಿಯಾದ ರಿಬರಿಕೋವಾ ಉಕ್ರೇನಿನ ಕ್ಯಾಥರಿನಾ ಬೊಂಡಾರೆಂಕೊ ಅವರನ್ನು 7-5, 3-6, 6-1ರಿಂದ; ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ಫ್ರಾನ್ಸ್‌ನ ಅಲಿಜೆ ಕಾರ್ನೆಟ್ ಅವರನ್ನು 7-5, 6-4ರಿಂದ; ಸ್ಪೇನಿನ ಕಾರ್ಲಾ ಸೂರೆಜ್ ನವಾರೊ ಎಸ್ತೋನಿಯಾದ ಕಯಾ ಕನೆಪಿ ಅವರನ್ನು 3-6, 6-1, 6-3ರಿಂದ ಸೋಲಿಸಿ 4ನೇ ಸುತ್ತಿಗೆ ಏರಿದರು.