ಹೈದರಾಬಾದ್ : ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ, ಯಾವುದೇ ಚಲನಚಿತ್ರ ಪ್ರದರ್ಶನ ಪ್ರಾರಂಭಿಸುವ ಮೊದಲು ಅದನ್ನೇ ಪ್ರದರ್ಶಿಸಲಾಗುತ್ತದೆ. ಆದಾಗ್ಯೂ, ನಿಜ ಜೀವನವು ಕೆಲವು ಸಂದರ್ಭಗಳಲ್ಲಿ ರೀಲ್ ಜೀವನವನ್ನು ಏಕರೂಪವಾಗಿ ಅನುಕರಿಸುತ್ತದೆ ಮತ್ತು ಅನೇಕ ಬಾರಿ ಜನರು ಚಿತ್ರ ಪರದೆಯ ಮೇಲೆ ಏನು ನೋಡುತ್ತಾರೋ ಅದನ್ನೇ ಸ್ಫೂರ್ತಿಯಾಗಿ ಪಡೆಯುತ್ತಾರೆ. ಇದಕ್ಕೆ ಸಾಕ್ಷಿಯಾಗಿ 15 ವರ್ಷದ ಬಾಲಕ ತೀವ್ರ ಕೆಮ್ಮಿನಿಂದ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇತ್ತೀಚಿನ ಬ್ಲಾಕ್‌ಬಸ್ಟರ್ ಚಲನಚಿತ್ರ ‘ಕೆಜಿಎಫ್-2’ ನ ‘ರಾಕಿ ಭಾಯ್’ನ ಧೂಮಪಾನದ ಶೈಲಿಯಿಂದ ಅಪ್ರಾಪ್ತ ಬಾಲಕ ಸ್ಫೂರ್ತಿ ಪಡೆದಿದ್ದು, ಎರಡು ದಿನಗಳ ಅವಧಿಯಲ್ಲಿ, ಅಪ್ರಾಪ್ತ ವಯಸ್ಕ ಸಿಗರೇಟ್ ಗಳನ್ನು ಸೇದಿದ್ದು, ನಿರಂತರವಾಗಿ ಕೆಮ್ಮಲು ಪ್ರಾರಂಭಿಸಿದಾಗ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಬೇಕಾಯಿತು.
ತಮ್ಮ ಮಗ ಸಿಗರೇಟ್ ಗಳನ್ನು ಸೇದಿದ್ದು, ಅದೂ ಕೂಡ ಮೊದಲ ಬಾರಿಗೆ ಎಂಬುದು ಪೋಷಕರಿಗೂ ತಿಳಿದಿರಲಿಲ್ಲ, ಎದೆಯ ಎಕ್ಸ್ ರೇ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ನಡೆಸಿದಾಗ, ಧೂಮಪಾನಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲೆಯ ಲಕ್ಷಣಗಳು ಈ ಹುಡುಗನ ಬೆರಳುಗಳ ಮೇಲೆ ಕಂಡುಬಂದಿದೆ.
ಕೆಜಿಎಫ್ 2 ಚಿತ್ರದ ಧೂಮಪಾನ ಮಾಡುವ ಸ್ಟೈಲ್ ನಿಂದ ಪ್ರೇರಿತನಾಗಿದ್ದೆ ಎಂದು ಬಾಲಕ ತನ್ನ ಪೋಷಕರ ಮುಂದೆ ವೈದ್ಯರ ಬಳಿ ಒಪ್ಪಿಕೊಂಡಾಗ ನಿಜ ಬಯಲಾಗಿದೆ. ಬಾಲಕನ ತಕ್ಷಣ ತಾಯಿ ಅಳಲು ಪ್ರಾರಂಭಿಸಿದರು ಮತ್ತು ತಂದೆ ಹುಡುಗನನ್ನು ಹೊಡೆಯಲು ಪ್ರಾರಂಭಿಸಿದ್ದು, ವೈದ್ಯರು ನಾನು ಅವರೆಲ್ಲರನ್ನೂ ಪ್ರತ್ಯೇಕಿಸಿ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಜಿಎಫ್ 2ರ ಟೀಸರ್ ಬಿಡುಗಡೆಯಾದಾಗ ಕರ್ನಾಟಕ ರಾಜ್ಯ ತಂಬಾಕು ವಿರೋಧಿ ಘಟಕವು ನಾಯಕ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಅವರಿಗೆ ನೋಟಿಸ್ ನೀಡಿತ್ತು. ಚಿತ್ರದ ದೃಶ್ಯಕ್ಕಾಗಿ ಹಲವರು ಆಕ್ಷೇಪವನ್ನೂ ವ್ಯಕತಪಡಿಸಿದ್ದರು.