Advertisement

ಪ್ರೇಮ ವೈಫ‌ಲ್ಯಕ್ಕೆ ನೊಂದು ಸಾವಿಗೆ ಶರಣಾದ ಟೆಕ್ಕಿ 

11:31 AM May 21, 2017 | Team Udayavani |

ಬೆಂಗಳೂರು: ಪ್ರೇಮ ವೈಫ‌ಲ್ಯದಿಂದ ಮನನೊಂದ ಸಾಫ್ಟ್ವೇರ್‌ ಉದ್ಯೋಗಿ ಸ್ನೇಹಿತನ ಮನೆಯಲ್ಲೇ ನೇಣು ಬಿಗಿದು­ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಟಾಳದಲ್ಲಿ ನಡೆದಿದೆ. ಹಳಿಯಾಳ ಮೂಲದ ಸುನೀಲ್‌ಕುಮಾರ್‌(28) ಮೃತ. ಹೆಬ್ಟಾಳದ ಆನಂದ­ಗಿರಿಯ ಸ್ನೇಹಿತ ವೀರೇಶ್‌ ಮನೆ­ಯಲ್ಲಿ ಮೇ 19 ರಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾ­ಗಿದೆ.

Advertisement

ಸಂಜೆ ವೀರೇಶ್‌ ಕಚೇರಿಯಿಂದ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂಬಿಎ ಸ್ನಾತಕೋತ್ತರ ಪದವೀಧರ ಸುನೀಲ್‌ 4 ವರ್ಷಗಳಿಂದ ಸಾಫ್ಟ್ವೇರ್‌ ಕಂಪನಿಯೊಂದರಲ್ಲಿ ಕೆಲಸ ಮಾಡು­ತ್ತಿದ್ದು, ಜೆ.ಪಿ.ನಗರದ ಶಾಕಾಂ­ಬರಿ­ನಗರ­ದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಈ ಮಧ್ಯೆ ತಮಿಳುನಾಡು ಮೂಲದ ಯವತಿ, ಸಹೋದ್ಯೋಗಿ ಜತೆ ಪ್ರೇಮಾಂ­ಕುರವಾಗಿದೆ. ಆದರೆ, ಮದುವೆ ವಿಚಾರ­ವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಹಿನ್ನೆಲೆಯಲ್ಲಿ ರಾಜಿ ಮಾಡಿಕೊಳ್ಳಲು ಮೇ 18ರಂದು ಸ್ನೇಹಿತ ವೀರೇಶ್‌ ಮನೆಗೆ ಬರುವಂತೆ ಸುನೀಲ್‌ ಸೂಚಿಸಿದ್ದ. ಅದರಂತೆ ಯುವತಿ ಬಂದಿದ್ದಳು.

ಬಳಿಕ ಯುವತಿ “ನಿನ್ನೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಿಲ್ಲ. ಕೆಲಸಕ್ಕೆ ಹೋಗಬೇಕೆಂದು’ ಹೇಳಿ ಹೋಗಿದ್ದಾಳೆ. ಇದರಿಂದ ಬೇಸರಗೊಂಡ ಸುನೀಲ್‌, ರಾತ್ರಿಯೆಲ್ಲ ಕಣ್ಣೀರಿಡುತ್ತಿದ್ದ. ಶುಕ್ರವಾರ ಬೆಳಗ್ಗೆ ಸ್ನೇಹಿತ ವೀರೇಶ್‌ ಕೆಲಸಕ್ಕೆ ಹೋಗುತ್ತಿದ್ದಂತೆ, ಕೊಠಡಿಗೆ ತೆರಳಿ ಸುನೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಯುವತಿ ವಿರುದ್ಧ ದೂರು ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next