ಬೆಂಗಳೂರು: ಒಂದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡೆರಡು ಕಡೆ ವಿಳಾಸ ನೀಡಿ ಗುರುತಿನ ಚೀಟಿ ಪಡೆದವರ ಪತ್ತೆಗೆ ರಾಜ್ಯ ಚುನಾವಣಾ ಆಯೋಗ ಹೊಸ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ.
ಮೊದಲ ಹಂತದಲ್ಲಿ ಬೆಂಗಳೂರಿನ ಒಂದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂ ಥ 4 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದಿದೆ. ಶೀಘ್ರವೇ ಇತರೆಡೆಯಲ್ಲೂ ಪರಿಶೀಲಿಸಲಿದೆ.
ಎರಡೆರಡು ವಾರ್ಡ್‌ಗಳಲ್ಲಿ ಮತದಾರರ ಪಟ್ಟಿಗೆ ನೋಂದಾಯಿಸಿದ ವ್ಯಕ್ತಿಗಳನ್ನು ಫೋಟೋ ಸಿಮಿಲರ್ ಎಂಟ್ರೀಸ್ ಮತ್ತು ಡೆಮೋಗ್ರಾಫಿಕ್ ಸಿಮಿಲರ್ ಎಂಟ್ರೀಸ್ ಎಂಬ ತಂತ್ರಾಶದ ಮೂಲಕ ಪತ್ತೆ ಮಾಡಲಾಗಿದೆ. ಚಿಕ್ಕಪೇಟೆ, ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿ ಕವಾಗಿ ಸರ್ವೆ ಮಾಡಿದ್ದು, ನಗರ ವ್ಯಾಪ್ತಿ ಯಲ್ಲಿನ ಮತದಾರರ ಸಂಖ್ಯೆ 94.50 ಲಕ್ಷದಿಂದ 90.51 ಲಕ್ಷಕ್ಕೆ ಇಳಿದಿದೆ.
ಒಂದೇ ಬಗೆಯ ಫೊಟೋಗಳಿರುವ ಗುರುತಿನ ಚೀಟಿಯನ್ನು ಸಾಫ್ಟ್ವೇರ್ ಮೂಲಕ ಗುರುತಿಸ ಲಾಗುತ್ತದೆ. ಎರಡೆರಡು ಕಡೆಯ ವಿಳಾಸದಲ್ಲಿ ಗುರುತಿನ ಚೀಟಿ ಹೊಂದಿದ್ದರೆ ಅವರ ಭಾವಚಿತ್ರ ಮತ್ತು ಮಾಹಿತಿ ಯನ್ನು ಎಆರ್‌ಒಗಳಿಗೆ ನೀಡಲಿದೆ. ಎಆರ್‌ಒಗಳು ಬೂತ್ ಮಟ್ಟದ ಅಧಿಕಾರಿಗೆ ನೀಡುವರು. ಆ ಬಳಿಕ ಅಧಿಕಾರಿಗಳು ಇಂಥವರ ಮನೆಗೆ ಹೋಗಿ ಮಾಹಿತಿ ಪಡೆಯುವರು. ಜತೆಗೆ ಯಾವುದಾದರು ಒಂದು ವಿಳಾಸದ ಮತದಾರರ ಗುರುತಿನ ಚೀಟಿ ಇಟ್ಟು ಕೊಳ್ಳುವಂತೆ ತಿಳಿಸಿ, ಅವರಿಂದ ಫಾರ್ಮ್ 7 ಭರ್ತಿ ಮಾಡಿಸಿಕೊಂಡು ನಂತರ ಒಂದು ಕಡೆಯ ಹೆಸರನ್ನು ತೆಗೆದು ಹಾಕಲಾಗುತ್ತದೆ.
-ಗಿರೀಶ್ ಗರಗ