Advertisement

ತಂತ್ರಜ್ಞರೇ, ಗಮನಿಸಿ…ಮತ್ತೆ ಕರೆದಿದೆ ಕೆಪಿಎಸ್‌ಸಿ

03:35 PM Feb 27, 2018 | Harsha Rao |

ಭಾರತದಲ್ಲಿ ಅನೇಕ ವಿಶ್ವ ವಿದ್ಯಾಲಯಗಳು ತಂತ್ರಜ್ಞರನ್ನು ಸೃಷ್ಟಿಸುತ್ತಿವೆ. ಸಾಮಾನ್ಯ ಬಸ್‌ಗಳಿಂದ, ನಭಕ್ಕೇರುವ ಕ್ಷಿಪಣಿಯವರೆಗೆ ಹೆಚ್ಚಿನ ತಾಂತ್ರಿಕ ಉತ್ಪನ್ನಗಳು ದೇಶದಲ್ಲಿಯೇ ತಯಾರಾಗುತ್ತಿವೆ. ದೇಶ ಕಟ್ಟುವಲ್ಲಿ ತಂತ್ರಜ್ಞರ ಪರಿಶ್ರಮ ಬಹಳಷ್ಟಿದೆ. ಪ್ರಸ್ತುತ ಕರ್ನಾಟಕ ಲೋಕ ಸೇವಾ ಆಯೋಗದ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತಾಲಯದಲ್ಲಿ 1,520 ಕಿರಿಯ ಅಧಿಕಾರಿ ಹುದ್ದೆಗಳಿಗೆ ತಂತ್ರಜ್ಞರಿಗೆ ಅವಕಾಶ ಕಲ್ಪಿಸಲಾಗಿದೆ…

Advertisement

ತಾಜ್‌ ಮಹಲನ್ನು ನಿರ್ಮಿಸಿದ್ದು ಶಹಜಾನ್‌ ಅಲ್ಲ, ಗಾರೆ ಕೆಲಸದವರು ಅಂತ ಕೆಲವರು ಹಾಸ್ಯ ಮಾಡಿ ಹೇಳುವುದಿದೆ. ಅಂದರೆ, ಎಲ್ಲ ಕೆಲಸಗಳ ಹಿಂದೆಯೂ ಒಬ್ಬ ಶ್ರಮಿಕ ಇದ್ದೇ ಇರುತ್ತಾನೆ. ಅದರ ಕ್ರೆಡಿಟ್ಟು ಯಾರಿಗೆ ಹೋಗುತ್ತೋ, ಅದು ಬೇರೆ ಪ್ರಶ್ನೆ. ಈ ಸ್ಥಿತಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲೂ (ಕೆಪಿಎಸ್‌ಸಿ) ಇದೆ. ಆದರೆ, ಹೀಗೆ ತೆರೆಮರೆಯಲ್ಲಿ ಮಾಡುವ ಕೆಲಸಗಳಿಗೆ ಕೈ ತುಂಬಾ ಪಗಾರ ಇಲ್ಲಿದೆ!

 ಲೋಕಸೇವಾ ಆಯೋಗದಲ್ಲಿ ತೆರೆಮರೆಯಲ್ಲಿ ಕೆಲಸ ನಿರ್ವಹಿಸುವ ತಾಂತ್ರಿಕ ವಲಯದ ಪರಿಶ್ರಮ ಪ್ರಶಂಸನೀಯ. ಈ ವಲಯದಲ್ಲಿ ಸಿ, ಡಿ ಗ್ರೂಪ್‌ನ ನೌಕರರೇ ಹೆಚ್ಚು. ಎ, ಬಿ ಗ್ರೂಪ್‌ನ ಅಧಿಕಾರಿಗಳು ನೀಡುವ ನಿರ್ದೇಶನಕ್ಕೆ ರೂಪ ನೀಡುವವರು ಇವರೇ. ಇಂಥ ತಂತ್ರಜ್ಞರಿಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಮೂಲಕ ಕರ್ನಾಟಕ ಲೋಕಸೇವಾ ಆಯೋಗವು ಅವಕಾಶ ಕಲ್ಪಿಸುತ್ತಿದೆ. ಪ್ರಸ್ತುತ ಫಿಟ್ಟರ್‌, ಟರ್ನರ್‌, ಎಲೆಕ್ಟ್ರಿಶಿಯನ್‌ ಸೇರಿದಂತೆ 1,520 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಮೀಸಲಾತಿ, ವಿದ್ಯಾರ್ಹತೆ
ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿತ ಡಿಪ್ಲೊಮ ಅಥವಾ ಎಂಜಿನಿಯರಿಂಗ್‌, ಪ್ರಾಥಮಿಕವಾಗಿ ಐಟಿಐ ಮಾಡಿದ್ದರೆ ಒಳಿತು. ಆಯಾ ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ ಪಡೆದಿರಬೇಕು. ಅರ್ಜಿ ಸಲ್ಲಿಕೆಗೆ ಕನಿಷ್ಠ 18, ಗರಿಷ್ಠ 35 ವರ್ಷ ವಯೋಮಿತಿ ಸೂಚಿಸಲಾಗಿದೆ. ಪ್ರವರ್ಗಗಳಿಗೆ 3 ವರ್ಷ, ಪರಿಶಿಷ್ಟರಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು ಅಯಾ ಹುದ್ದೆಗೆ ಕುರಿತ ವಿದ್ಯಾರ್ಹತಾ ದಾಖಲೆ ಪ್ರತ್ಯೇಕವಾಗಿ ನೀಡಬೇಕು. ವೇತನ- 17,650- 32,000 ರೂ. ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯೋಗವು ನಡೆಸುವ ಎಸ್ಸೆಸ್ಸೆಲ್ಸಿ ಮಟ್ಟದ ಭಾಷಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಇದರ ಜ್ಯೇಷ್ಠತೆ ಪರಿಗಣಿಸಲಾಗುತ್ತದೆ. ಜೊತೆಗೆ 200-200 ಅಂಕಗಳ ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆಯನ್ನು ನಿರ್ವಹಿಸಬೇಕು. ಇದು ಒಎಂಆರ್‌ ಅಥವಾ ಗಣಕ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯಾಗಿರುತ್ತದೆ. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿರುತ್ತದೆ.

Advertisement

ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಕೆ ಮಾಡಬೇಕಿದ್ದು, www.kpsc.kar.nic.in ಹೋಮ್‌ ಪೇಜ್‌ನಲ್ಲಿ APPLY ONLINE- APPLICATION FOR JTO POSTS ಮೂಲಕ ಪ್ರವೇಶಿಸಿ, ನ್ಯೂ ರಿಜಿಸ್ಟ್ರೇಷನ್‌ ಮಾಡಿಕೊಳ್ಳಿ ಅಥವಾ ಈಗಾಗಲೇ ರಿಜಿಸ್ಟ್ರೇಷನ್‌ ಆಗಿದ್ದರೆ ಪಾಸ್‌ವರ್ಡ್‌ ನೀಡಿ ಮುಂದಿನ ಪುಟಕ್ಕೆ ಪ್ರವೇಶಿಸಿ. (ಆಗಿಲ್ಲದಿದ್ದರೆ ಹೆಸರು, ತಂದೆ/ ತಾಯಿ ಹೆಸರು, ಇ- ಮೇಲ್‌ ವಿಳಾಸ ನೀಡಿ ಸಬಿ¾ಟ್‌ ಮಾಡಿ, ಲಾಗಿನ್‌ ಐಡಿ, ಪಾಸ್‌ವರ್ಡ್‌ ನಿಮ್ಮ ಇ-ಮೇಲ್‌ಗೆ ರವಾನೆಯಾಗುತ್ತದೆ)

ಮುಂದಿನ ಪುಟದಲ್ಲಿ ಅರ್ಜಿ ನಮೂನೆ ಮೂಡುತ್ತದೆ. ಪರ್ಸನಲ್‌ ಡಿಟೇಲ್ಸ್‌ ಬಟನ್‌ ಒತ್ತಿದಲ್ಲಿ ಹುದ್ದೆಗಳ ವಿವರ ದೊರೆಯುತ್ತದೆ. ಬಳಿಕ ವಿದ್ಯಾರ್ಹತೆ ವಿವರ ನೀಡಿ, ಪೇಮೆಂಟ್‌ ಡಿಟೇಲ್ಸ್‌ ಬಟನ್‌ ಒತ್ತಿ ಮತ್ತೂಮ್ಮೆ ವಿವರ ನಮೂದಾಗುತ್ತದೆ. ಅಲ್ಲಿ ತಮ್ಮ ವಿವರ ಸರಿ ಇದೆಯೇ ಪರಿಶೀಲಿಸಿ, ಸೇವ್‌ ಮಾಡಿ. ಅಗತ್ಯವಿದ್ದರೆ ತಿದ್ದುಪಡಿ ಮಾಡಿ. ಮುಂದಿನ ಪುಟದಲ್ಲಿ ಈಗಾಗಲೆ ಹೊಂದಿಸಿಕೊಂಡಿರುವ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ, ದೃಢೀಕರಿಸಿ, ಚಲನ್‌ ಡೌನ್‌ಲೋಡ್‌ ಬಟನ್‌ ಒತ್ತಿ ಚಲನ್‌ ಪಡೆಯಿರಿ. ಇ- ಪಾವತಿ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಿ, ಪೋಸ್ಟ್‌ ಆಫೀಸ್‌ ಸ್ಟಿಕ್ಕರ್‌ ಚಲನ್‌ ಮೇಲೆ ಅಂಟಿಸಿದೆಯೇ ದೃಢೀಕರಿಸಿಕೊಳ್ಳಿ.

ಸಾಮಾನ್ಯ ಅಭ್ಯರ್ಥಿಗೆ 600 ರೂ. ಪರಿಶಿಷ್ಟರಿಗೆ 300 ರೂ. ಅರ್ಜಿ ಶುಲ್ಕ. ಅರ್ಜಿ ಸಲ್ಲಿಕೆಗೆ ಮಾರ್ಚ್‌ 20 ಕೊನೇ ದಿನ. ಹೆಚ್ಚಿನ ಮಾತಿಗೆ www.kpsc.kar.nic.in ಸಂಪರ್ಕಿಸಿ.

ಎಷ್ಟು ಹುದ್ದೆಗಳು?
ಫಿಟ್ಟರ್‌ – 348, ಟರ್ನರ್‌ – 85, ಎಲೆಕ್ಟ್ರಾನಿಕ್‌ ಮೆಕಾನಿಕ್‌- 133, ಮೆಕಾನಿಕ್‌ ಮೋಟಾರ್‌ ವೆಹಿಕಲ್‌- 99, ಐಸಿಟಿಎಸ್‌ಎಂ- 77, ಎಂಆರ್‌ ಎಸಿ- 94, ವರ್ಕ್‌ಶಾಪ್‌ ಕ್ಯಾಲುಕ್ಲೇಟರ್- 150, ಎಂಜಿನಿಯರಿಂಗ್‌ ಡಾಯಿÅಂಗ್‌- 98, ಮೆಕಾನಿಕ್‌ ಡೀಸೆಲ್‌- 49, ಇನ್‌ಸ್ಟ್ರೆಮೆಂಟ್‌ ಮೆಕಾನಿಕ್‌- 4, ಎಲೆಕ್ಟ್ರೋಫ್ಲೇಟರ್‌- 1, ಎಲೆಕ್ಟ್ರಿಶಿಯನ್‌- 288, ಡ್ರೆಸ್‌ ಮೇಕಿಂಗ್‌- 31, ಇಂಟೀರಿಯರ್‌ ಡಿಸೈನಿಂಗ್‌ ಆ್ಯಂಡ್‌ ಡೆಕೋರೇಷನ್‌- 10, ಡ್ರಾಫ್ಟ್ಮೆನ್‌ ಸಿವಿಲ್‌- 4, ವೆಲ್ಡರ್‌-16, ಮೆನಿಸ್ಟ್‌- 5, ಆರ್ಕಿಟೆಕ್ಟರಲ್‌ ಅಸಿಸ್ಟೆಂಟ್‌-7, ಕಾಪೆìಂಟರಿ- 2, ಡ್ರಾಫ್ಟ್ಮೆನ್‌ ಮೆಕಾನಿಕಲ್‌- 9, ಎಂಎಂಟಿಎಂ- 7, ಸೆಕ್ರೆಟೆರಿಯಲ್‌ ಪ್ರಾಕ್ಟೀಸ್‌- 2, ಪಿಪಿಒ- 1, ಒಟ್ಟು 1, 520 ಹುದ್ದೆಗಳಿದ್ದು, ಅವುಗಳನ್ನು ಮೂಲ ವೃಂದ ಮತ್ತು ಹೈದರಾಬಾದ್‌ ಕರ್ನಾಟಕ ವೃಂದಕ್ಕೆ ವಿಂಗಡಿಸಲಾಗಿದೆ.

– ಎನ್‌. ಅನಂತನಾಗ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next