Advertisement

Tutorial ತಾಂತ್ರಿಕ ಶಿಕ್ಷಣದ ಟ್ಯುಟೋರಿಯಲ್‌: ಸರಕಾರಕ್ಕೆ ವರದಿ ಕಡ್ಡಾಯ

12:27 AM Oct 04, 2023 | Team Udayavani |

ಉಡುಪಿ: ಡಿಪ್ಲೊಮಾ, ಬಿ.ಇ. ಸಹಿತ ವಿವಿಧ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಟ್ಯುಟೋರಿಯಲ್‌ ನಡೆಸುತ್ತಿರುವವರು ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಜತೆಗೆ ಬೋಧಿಸಲು ಪರಿಣಿತ ಉಪನ್ಯಾಸಕರು/ ಶಿಕ್ಷಕರನ್ನು ನೇಮಿಸಿಕೊಂಡು ಅವರ ವಿದ್ಯಾರ್ಹತೆ, ಅನುಭವ, ಸಂಭಾವನೆಯ ಮಾಹಿತಿ ಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

Advertisement

ತಾಂತ್ರಿಕ ಶಿಕ್ಷಣದಲ್ಲಿ ಮನೆಪಾಠ/ ಕೋಚಿಂಗ್‌/ಸಿಇಟಿ ಕೋಚಿಂಗ್‌ ಇತ್ಯಾದಿ ಟ್ಯುಟೋರಿಯಲ್‌ ನಡೆಸಲು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಸರಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು/ ಬೋಧಕರು/ಕಾರ್ಯಾಗಾರ ಸಿಬಂದಿ/ ಕಚೇರಿ ಸಿಬಂದಿಯನ್ನು ಟ್ಯುಟೋರಿ ಯಲ್‌ ತರಗತಿಗಳನ್ನು ನಡೆಸಲುಅಥವಾ ಪಾಠ, ಪ್ರವಚನಕ್ಕೆ ನೇಮಿಸಿಕೊಳ್ಳುವುದು ಅಪರಾಧವಾ ಗಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಸೂಚನೆ ಹೊರಡಿಸಿದೆ.

ಅನಧಿಕೃತವಾಗಿ ಟ್ಯುಟೋರಿಯಲ್‌ ತರಗತಿ ನಡೆಸುವುದು ಅಥವಾ ಟ್ಯುಟೋರಿಯಲ್‌ ಸಂಸ್ಥೆಗಳನ್ನು
ಹೊಂದಿರುವುದೂ ಅಪರಾಧ.

ನೋಂದಾಯಿತ ಟ್ಯುಟೋರಿಯಲ್‌ಗ‌ಳು ಸರಕಾರದ ನಿಯಮಾನು ಸಾರವಾಗಿಯೇ ಕಾರ್ಯ ನಿರ್ವಹಿಸ ಬೇಕು. ನಿಯಮಾವಳಿ ಪ್ರಕಾರ ಪ್ರತೀ ವರ್ಷ ಇಲಾಖೆಗೆ ವಾರ್ಷಿಕ ವರದಿ ಸಲ್ಲಿಸಿ ನೋಂದಣಿ ನವೀಕರಿಸಿಕೊಳ್ಳಬೇಕು.
ಹಾಗೆಯೇ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಿದ ಕಟ್ಟಡ, ನಿಗದಿತ ವಿಸ್ತೀರ್ಣವುಳ್ಳ ತರಗತಿ ಕೊಠಡಿ, ಶೌಚಾಲಯ, ನೀರಿನ ವ್ಯವಸ್ಥೆಯನ್ನು ಹೊಂದಿರಬೇಕು.

ಒಂದು ಟ್ಯುಟೋರಿಯಲ್‌ ತರಗತಿಯಲ್ಲಿ ಗರಿಷ್ಠ 30 ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪೀಠೊಪಕರಣ ವ್ಯವಸ್ಥೆ ಮಾಡಬೇಕು. ಟ್ಯುಟೋರಿಯಲ್‌ ತರಗತಿ ನಡೆಸಲು ಪರಿಣಿತ ಉಪನ್ಯಾಸಕರು/ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಅವರ ವಿದ್ಯಾರ್ಹತೆ, ಸೇವಾನುಭವ, ಸಂಭಾವನೆ ಇತ್ಯಾದಿ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು.

Advertisement

ವಿದ್ಯಾರ್ಥಿಗಳಿಂದ ಪಡೆದ ಟ್ಯುಟೋರಿಯಲ್‌ ಶುಲ್ಕದ (ಮೂಲ ರಶೀದಿ ಸಮೇತ) ವಿವರ, ಬಟವಾಡೆಗಳ ವಿವರಗಳು ಹಾಗೂ ಇತರೆ ಖರ್ಚುಗಳ ಮಾಹಿತಿ ಒಳಗೊಂಡ ವಾರ್ಷಿಕ ವರದಿಯನ್ನು ಕಡ್ಡಾಯವಾಗಿ ಇಲಾಖೆಗೆ ಸಲ್ಲಿಸ
ಬೇಕು. ಸರಕಾರದ ನಿಯಮ ಉಲ್ಲಂ ಸಿದರೆ ಟ್ಯುಟೋರಿಯಲ್‌ ನೋಂದಣಿ ರದ್ದುಪಡಿಸಿ, ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲಾಗುವುದು ಎಂದು ತಾಂತ್ರಿಕ ಶಿಕ್ಷಣ ಇಲಾಖೆಯು ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next