Advertisement

ವಾಹನ ತಪಾಸಣೆ-ಟ್ರಾಫಿಕ್ ಪೊಲೀಸ್ ಜತೆ ವಾಗ್ವಾದ; ಹೃದಯಾಘಾತದಿಂದ ಟೆಕ್ಕಿ ಸಾವು

09:40 AM Sep 11, 2019 | Team Udayavani |

ನೋಯ್ಡಾ:ಸಂಚಾರಿ ನಿಯಮ ಉಲ್ಲಂಘಿಸಿದ್ದ ಯುವಕನೊಬ್ಬ ಟ್ರಾಫಿಕ್ ಪೊಲೀಸ್ ಬಳಿ ತೀವ್ರ ಮಾತಿನ ಚಕಮಕಿಯಿಂದ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

Advertisement

35 ವರ್ಷದ ಯುವಕ ಸಾಫ್ಟ್ ವೇರ್ ಕಂಪನಿ ಉದ್ಯೋಗಿ ತನ್ನ ಕಾರಿನಲ್ಲಿ ಪೋಷಕರ ಜತೆ ಕಾರಿನಲ್ಲಿ ಆಗಮಿಸುತ್ತಿದ್ದ ವೇಳೆ ಗಾಜಿಯಾಬಾದ್ ಸಮೀಪ ತಪಾಸಣೆಗಾಗಿ ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿರುವುದಾಗಿ ವರದಿ ತಿಳಿಸಿದೆ.

ಘಟನೆ ಬಗ್ಗೆ ತನಿಖೆ ನಡೆಸಿದ್ದು, ಆ ಯುವಕ ಡಯಾಬಿಟೀಸ್ ನಿಂದ ಬಳಲುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಗೌತಮ್ ಬುದ್ಧ ನಗರ ಎಸ್ ಎಸ್ ಪಿ ವೈಭವ್ ಕೃಷ್ಣಾ ತಿಳಿಸಿದ್ದಾರೆ.

ನೂತನ ಸಂಚಾರಿ ನಿಯಮದ ಹೆಸರಿನಲ್ಲಿ ಟ್ರಾಫಿಕ್ ಪೊಲೀಸ್ ತಮ್ಮ ಮಗನ ಬಳಿ ಅನುಚಿತವಾಗಿ ವರ್ತಿಸಿರುವುದಾಗಿ 65ವರ್ಷದ ತಂದೆ ಆರೋಪಿಸಿದ್ದಾರೆ. ಯಾವುದೇ ವಿಚಾರಣೆಗೂ ಒಂದು ನಿಯಮವಿದೆ. ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಬಹುದಿತ್ತು. ನಾವು ವಯಸ್ಸಾದವರು ಕಾರಿನೊಳಗೆ ಕುಳಿತಿದ್ದಾಗ, ದಿಢೀರನೆ ಕಾರನ್ನು ತಡೆದು ತಮ್ಮ ದೊಣ್ಣೆಯಿಂದ ಕಾರಿಗೆ ಹೊಡೆದಿದ್ದರು. ಈ ರೀತಿ ವರ್ತಿಸಲು ಕಾನೂನಿನಲ್ಲಿ ಅವಕಾಶವಿದಯೇ ಎಂಬುದು ನನಗೆ ಗೊತ್ತಿಲ್ಲ ಎಂದು ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಭಾನುವಾರ ಸಂಜೆ 6ಗಂಟೆ ನಡೆದಿತ್ತು. ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ನನ್ನ 5 ವರ್ಷದ ಮೊಮ್ಮಗಳು ತಂದೆಯನ್ನು ಕಳೆದುಕೊಂಡಿರುವುದಾಗಿ ಯುವಕನ ತಂದೆ ಅಳಲು ತೋಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next