Advertisement

ವೀರಪುತ್ರನಿಗೆ ಮಿಡಿದ ಕಂಬನಿ

07:34 AM Feb 17, 2019 | Team Udayavani |

ಜಿಲ್ಲೆಯ ಯೋಧ ಎಚ್‌.ಗುರು ವೀರಮರಣಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ರಾಜ್ಯದ ಜನತೆ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಗುರು ಪರಿವಾರಕ್ಕೆ ಸಾಂತ್ವನ ಹೇಳಿದ್ದು, ಯೋಧನ ಅಂತ್ಯಕ್ರಿಯೆಯನ್ನು ಸಕಲ ಗೌರವಗಳೊಂದಿಗೆ ಸಲ್ಲಿಸಿದ್ದಾರೆ. ಹಾಗೆಯೆ ಪಾಕಿಸ್ತಾನದ ಕ್ರೌರ್ಯವನ್ನು ಹಿಮ್ಮೆಟ್ಟಿಸಲು ಇಡೀ ದೇಶವೇ ಒಂದಾಗಿ ತಕ್ಕ ಉತ್ತರ ನೀಡಲು ಒತ್ತಾಯಸಿದ್ದಾರೆ.  

Advertisement

ಮದ್ದೂರು: ಉಗ್ರರ ದಾಳಿಯಿಂದ ಬಲಿಯಾದ ವೀರಯೋಧ ಎಚ್‌. ಗುರು ಅವರಿಗೆ ತಾಲೂಕಿನಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದ ವೀರಯೋಧ ಎಚ್‌. ಗುರು ಸೇರಿದಂತೆ 44 ಮಂದಿ ಯೋಧರಿಗೆ ತಾಲೂಕಿನ ವಿವಿಧ ಸಂಘಟನೆಗಳು ಮೇಣದ ದೀಪ ಹಿಡಿದು ಮೆರವಣಿಗೆ ನಡೆಸುವ ಮೂಲಕ ಯೋಧನ ಆತ್ಮಕ್ಕೆ ಶಾಂತಿ ಕೋರಿದರು.

ತಾಲೂಕಿನ ಕೆಸ್ತೂರು, ಕೆ. ಹೊನ್ನಲಗೆರೆ, ಕೊಪ್ಪ, ಬೆಸಗರಹಳ್ಳಿ ಸೇರಿದಂತೆ ಪಟ್ಟಣದ ವಿವಿಧೆಡೆ ಯೋಧ ಎಚ್‌. ಗುರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ತಾಲೂಕಿನ ಕೊಪ್ಪ ಸಂತೆ ಮೈದಾನದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಯೋಧ ಗುರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ಕೈಗೊಳ್ಳಲಾಯಿತು.

ಬಳಿಕ ಮಾತನಾಡಿದ ಜಯಕರ್ನಾಟಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಮಹಮದ್‌ ಇಲಿಯಾಜ್‌ ದೇಶದ ರಕ್ಷಣೆಯಲ್ಲಿ ಮುಂದಾಗಿರುವ ಯೋಧರಿಗೆ ರಕ್ಷಣೆ  ಇಲ್ಲದಂತಾಗಿರುವುದು ದುರಾದೃಷ್ಟಕರ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಾದರೂ ಯೋಧರ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದರು. 

ಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಸಂಘದ ಕಚೇರಿಯಲ್ಲಿ  ಯೋಧರ ಭಾವಚಿತ್ರಕ್ಕೆ ಪುಷ್ಪನ ನಮನ ಸಲ್ಲಿಸಿ ನಂತರ ಮೇಣದ ದೀಪ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ರೈತ ಸಂಘ ಜಿಲ್ಲಾಧ್ಯಕ್ಷ ಶಂಕರೇಗೌಡ, ಮುಖಂಡರಾದ ನ.ಲಿ.ಕೃಷ್ಣ, ರಾಜೇಶ್‌, ಮಹಲಿಂಗು, ಮೂರ್ತಿ, ನಾಗರಾಜು, ಗುಂಡಣ್ಣ, ಬಸವರಾಜು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next