Advertisement

ಎಸ್‌ಇಜೆಡ್‌ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ

02:57 PM Sep 30, 2020 | Suhan S |

ಮುಳಬಾಗಿಲು: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಮ್ಮದಟ್ಟಿ ಕಾಮ ನೂರು ಗೇಟ್‌ನಿಂದ ಕುರುಬರಹಳ್ಳಿ ಗೇಟ್‌ವರೆಗಿನ ಸುಮಾರು 1559 ಎಕರೆ ಪ್ರದೇಶವನ್ನು ಕೈಗಾರಿಕಾ ವಲಯಕ್ಕೆ ಗುರುತಿಸಿರುವುದನ್ನು ಕೆಯುಡಿಬಿ ಡೀಸಿ ಅನುರಾಧ ಹಾಗೂ ಉಪವಿಭಾಗಾಧಿಕಾರಿ ಸೋಮಶೇಖರ್‌ ಮತ್ತಿತರ ಅಧಿಕಾರಿಗಳೊಂದಿಗೆ ಅಬಕಾರಿ ಸಚಿವಎಚ್‌.ನಾಗೇಶ್‌ಮಂಗಳವಾರ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ನಾಗೇಶ್‌, ಬಯಲುಸೀಮೆ ಜಿಲ್ಲೆಯಲ್ಲಿ ನಿರುದ್ಯೋಗಹೋಗಲಾಡಿಸಲು ಹಿಂದೆಯೇ ಶಾಸಕ, ಸಚಿವರು ಆಗಿದ್ದ  ದಿ.ಆಲಂಗೂರು ಶ್ರೀನಿವಾಸ್‌ಅವರು ಈ ಪ್ರದೇಶವನ್ನು ಕೈಗಾರಿಕಾ ವಲಯ ನಿರ್ಮಾಣಕ್ಕೆ ಸಿದ್ಧತೆ ಮಾಡಿದ್ದರು. ಆದರೆ ನೀರಿನ ಅಭಾವದಿಂದ ಕೈಗೂಡಲಿಲ್ಲ. ಪ್ರಸ್ತುತ ಕೆ.ಸಿ.ವ್ಯಾಲಿ ನೀರು ಈ ಭಾಗದ ಕೆರೆಗಳಲ್ಲಿ ಹರಿಯುವುದರಿಂದ ಮತ್ತೆ ನನೆಗುದಿಗೆ ಬಿದ್ದಿದ್ದ ಕಡತಕ್ಕೆ ಮರುಜೀವ ನೀಡಲಾಗುತ್ತಿದ್ದು, ಸರ್ಕಾರದಮಟ್ಟದಲ್ಲಿಅನುಮೋದನೆಪಡೆದು ಶೀಘ್ರದಲ್ಲೇ ಕೈಗಾರಿಕಾ  ವಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಸ್ತುತ ರಾಷ್ಟ್ರೀಯಹೆದ್ದಾರಿಯ ಇಕ್ಕೆಲಗಳಲ್ಲಿ 200 ಮೀಟರ್‌ಗಳಷ್ಟು ಭೂಪ್ರದೇಶವನ್ನು ಕೈಗಾರಿಕಾ ವಲಯಕ್ಕೆಮೀಸಲಿಡಲಾಗಿದೆ.ಅದಕ್ಕೆ ಬೇಕಾದಂತಹ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಸತತ ಪ್ರಯತ್ನ ಮಾಡುವೆ. ಕೈಗಾರಿಕಾ ವಲಯಕ್ಕೆ ಗುರುತಿಸಿರುವ ಪ್ರದೇಶದಲ್ಲಿ ಆರು ಹಳ್ಳಿಗಳ ರೈತರ ಜಮೀನುಗಳು ಬರಲಿದ್ದು, ಅವರಿಗೂ ಸಹ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದರು.

ಕೆಯುಡಿಬಿ ಅಧಿಕಾರಿ ವೆಂಕಟೇಶ್‌, ತಹಶೀಲ್ದಾರ್‌ ಕೆ .ಎನ್‌. ರಾಜಶೇಖರ್‌, ಕಂದಾಯ ನಿರೀಕ್ಷಕ ‌ ಸುಬ್ರಹ್ಮಣಿ, ಗ್ರಾಮಲೆಕ್ಕಾಧಿಕಾರಿ ಗಳಾದ ಮಾನಸ, ಕಿರಣ್‌, ಗಿರೀಶ್‌ ಗೌಡ, ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಜಿಪಂ.ಮಾಜಿ ಸದಸ್ಯ ಬಿ.ಕೆ.ವೆಂಕಟನಾರಾಯಣ್‌, ಯಳಗೊಂಡಹಳ್ಳಿ ಚಿನ್ನಪ್ಪಯ್ಯ, ಆವಣಿ ವಿಜಿಕುಮಾರ್‌, ಗೊಲ್ಲಹಳ್ಳಿ ಜಗದೀಶ್‌, ಮಲ್ಲಪ್ಪನಹಳ್ಳಿ ವೆಂಕಟೇಶ್‌, ದೇವರಾಯಸಮುದ್ರ ಸೋಮಶೇಖರ್‌ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next