ನೆಲಮಂಗಲ: ತಾಲೂಕಿನ ಗ್ರಾಮಗಳಿಗೆ ವೈದ್ಯರ ತಂಡ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಣೆ ನಡೆಸಿ ಔಷಧಿ ನೀಡುವ ವಿಶೇಷ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಉತ್ತಮ ವೇದಿಕೆಯಾಗಿದೆ. ತಾಲೂಕಿನಲ್ಲಿ 15 ತಪಾಸಣಾ ಮೊಬೈಲ್ ವಾಹನಕ್ಕೆ ಚಾಲನೆ ನೀಡಲಾಗಿದೆ.
ಗ್ರಾಮಲೆಕ್ಕಾ ಧಿಕಾರಿ, ರಾಜಸ್ವನಿರೀಕ್ಷಕ, ಗ್ರಾಪಂ ಅಧಿಕಾರಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆ, ಪೊಲೀಸ್ ಅಧಿಕಾರಿಗಳು ಸೇರಿದಂತೆ ವೈದ್ಯರ ತಂಡ ಗ್ರಾಮಗಳಲ್ಲಿ ಮೊದಲು ಸೋಂಕಿತರ ಮನೆಗೆ ಭೇಟಿ ನೀಡಿ ಹೋಮ್ ಕ್ವಾರಂಟೈನ್ನಲ್ಲಿರುವ ಸೋಂಕಿತರ ಆರೋಗ್ಯ ತಪಾಸಣೆ ಜತೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ತಾಲೂಕಿನ 21ಗ್ರಾಪಂಗಳ ಗ್ರಾಮಕ್ಕೆ ಭೇಟಿ ನೀಡಿ ಹೋಮ್ಕ್ವಾರಂಟೈನ್ನ ಸೋಂಕಿತರನ್ನು ಪರೀಕ್ಷೆ ಮಾಡುವುದಲ್ಲದೇ ಮನೆ ಮಂದಿ ಆರೋಗ್ಯದ ಬಗ್ಗೆಯೂ ಪರಿಶೀಲನೆ ಮಾಡಿ ದ್ದಾರೆ. ಸೋಂಕಿತರ ಮಾಹಿತಿ ಪಡೆದಿದ್ದು ದೂರವಾಣಿ ಸಂಖ್ಯೆ ಸಹ ಪಡೆದುಕೊಂಡಿದ್ದಾರೆ.
ವೃದ್ಧರ ತಪಾಸಣೆ: ವೃದ್ಧರ ಮನೆಗಳಿಗೂ ಭೇಟಿ ನೀಡಿ ಮನೆಯಲ್ಲಿಯೇ ವಿಶ್ರಾಂತಿ ಪಡೆ ಯುವಂತೆ ಸೂಚನೆ ನೀಡಿದ್ದಾರೆ. ಸೋಂಕಿತರ ಮನೆಯವರು ಗ್ರಾಮದಲ್ಲಿ ಓಡಾಡದಂತೆ, ಸೌಲಭ್ಯ ಬೇಕಾದರೇ ಕಾರ್ಯಪಡೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಪ್ರದಕ್ಷಿಣೆ: ಕಸಬಾ ಹೋಬಳಿ ಹೊಸಪಾಳ್ಯ, ಮರಸರಹಳ್ಳಿ, ಸೇರಿ ಶ್ರೀನಿವಾಸಪುರ ಗ್ರಾಪಂನ ವಿವಿಧ ಗ್ರಾಮಕ್ಕೆ ರಾಜಸ್ವ ನಿರೀಕ್ಷಕ ಸುದೀಪ್, ಗ್ರಾಮಲೆಕ್ಕಾಧಿಕಾರಿ ಪೂಜಾ, ಬಾಲಕೃಷ್ಣ, ವೈದ್ಯ ಶಶಿಸುಧಾಕರ್, ಸಿಬ್ಬಂದಿ ಹರೀಶ್, ಆಶಾಕಾರ್ಯಕರ್ತೆ ಜಲಜಾಕ್ಷಿ, ಅಂಗನವಾಡಿ ಕಾರ್ಯಕರ್ತೆ ದಿನಮಣಿ, ಶ್ರೀನಿವಾಸಪುರ ಗ್ರಾಪಂ ಕಾರ್ಯದರ್ಶಿ ಕೃಷ್ಣ ಪ್ಪ ಮತ್ತಿತರ ಅಧಿಕಾರಿಗಳ ತಂಡ ಗ್ರಾಮಗಳ ರೌಂಡ್ಸ್ ಹಾಕಿ ಚಿಕಿತ್ಸೆ ನೀಡುವ ಜತೆ ಔಷಧಿ ವಿತರಣೆ ಮಾಡಿತು.