ಮುಂಬೈ: ವಿರಾಟ್ ಕೊಹ್ಲಿ ಅವರು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ ಬಳಿಕ ನಾಯಕನ ಸ್ಥಾನ ಖಾಲಿ ಉಳಿದಿದೆ. ಸದ್ಯಕ್ಕೆ ಯಾವುದೇ ಟೆಸ್ಟ್ ಸರಣಿ ಇಲ್ಲದಿರುವ ಕಾರಣ ಬಿಸಿಸಿಐ ಇದುವರೆಗೆ ಹೊಸ ನಾಯಕನ ಘೋಷಣೆ ಮಾಡಿಲ್ಲ. ನಾಯಕತ್ವದ ಆಕಾಂಕ್ಷಿಗಳ ಬಗ್ಗೆ ಹಲವರು ಹಲವು ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ನಾಯಕನಾಗಿ ವಿರಾಟ್ ಕೊಹ್ಲಿ ಅವರ ಸುದೀರ್ಘ ಅವಧಿಯ ನಂತರ ಟೆಸ್ಟ್ ಸ್ವರೂಪದಲ್ಲಿ ಪ್ರಬಲ ನಾಯಕನನ್ನು ಹೊಂದುವ ಪ್ರಾಮುಖ್ಯತೆಯನ್ನು ಶಮಿ ಒತ್ತಿ ಹೇಳಿದರು.
“ಖಂಡಿತವಾಗಿಯೂ, ತಂಡಕ್ಕೆ (ಟೆಸ್ಟ್ ಕ್ರಿಕೆಟ್‌ನಲ್ಲಿ) ನಾಯಕನ ಅಗತ್ಯವಿದೆ. ಹೊಸ ನಾಯಕನ ಅಡಿಯಲ್ಲಿ ನಮ್ಮ ಮೊದಲ ಸರಣಿ ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯುವುದು ಒಳ್ಳೆಯದು, ಆದ್ದರಿಂದ ಪರಿಸ್ಥಿತಿಗಳ ಪರಿಚಯವು ಒಂದು ರೀತಿಯ ಸಮಾಧಾನವನ್ನು ತರುತ್ತದೆ” ಎಂದು ಶಮಿ ಹೇಳಿದರು.
ಇದನ್ನೂ ಓದಿ:ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್
ಮುಂದಿನ ನಾಯಕ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ ನಾನೀಗ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನಾನು ನನ್ನ ಬೌಲಿಂಗ್ ಬಗ್ಗೆ ಮಾತ್ರ ಯೋಚನೆ ಮಾಡುತ್ತೇನೆ. ಯಾರಿಗೆ ನಾಯಕತ್ವ ನೀಡುತ್ತಾರೆ ಎನ್ನುವ ಬಗ್ಗೆ ಯೋಚನೆಯಿಲ್ಲ. ನಮ್ಮಲ್ಲಿ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮುಂತಾದವರು ಇದ್ದಾರಲ್ಲ” ಎಂದರು.