Advertisement

ಈಡನ್ ಅಂಗಳದಲ್ಲಿ ಮಕಾಡೆ ಮಲಗಿದ ಕರುಣ್ ಪಡೆ: ಭಾರಿ ಮುನ್ನಡೆ ಪಡೆದ ಬೆಂಗಾಲ್

09:58 AM Mar 02, 2020 | Team Udayavani |

ಕೋಲ್ಕತ್ತಾ:ಕೆ ಎಲ್ ರಾಹುಲ್, ಕರುಣ್ ನಾಯರ್, ಮನೀಷ್ ಪಾಂಡೆ ಸೇರಿದಂತೆ ಘಟಾನುಘಟಿ ಆಟಗಾರರಿದ್ದರೂ ಕರ್ನಾಟಕ ತಂಡ ರಣಜಿ ಸೆಮಿ ಫೈನಲ್ ನಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ.

Advertisement

ಇಶಾನ್ ಪೊರೆಲ್ ದಾಳಿಗೆ ಸಿಲುಕಿದ ಕರ್ನಾಟಕ ಕೇವಲ 122 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ 190 ರನ್ ಗಳ ಹಿನ್ನಡೆ ಅನುಭವಿಸಿತು.

ಮೊದಲ ದಿನ 9 ವಿಕೆಟ್ ಗೆ 275 ರನ್ ಗಳಿಸಿದ್ದ ಬಂಗಾಲ ಇಂದು 312 ರನ್ ಗೆ ಇನ್ನಿಂಗ್ಸ್ ಮುಗಿಸಿತು. ಅನುಸ್ತೂಪ್ ಮುಂಜುಮ್ದಾರ್ 149 ರನ್ ಗಳಸಿ ಅಜೇಯವಾಗಿ ಉಳಿದರು.

ಬ್ಯಾಟಿಂಗ್ ಆರಂಭಿಸಿದ ಕರ್ನಾಟಕಕ್ಕೆ ಮೊದಲ ಓವರ್ ನಿಂದಲೇ ಆಘಾತ ಆರಂಭವಾಗಿತ್ತು. ಸಮರ್ಥ್ ಶೂನ್ಯ ಸುತ್ತಿದರೆ ನಾಯಕ ನಾಯರ್ ಮೂರು ರನ್ ಮಾಡಿ ಔಟಾದರು. ಕೆ ಎಲ್ ರಾಹುಲ್ 26, ರನ್ ಗಳಿಸಿದರೆ 31 ರನ್ ಗಳಿಸಿದ ಕೃಷ್ಣಪ್ಪ ಗೌತಮ್ ರದ್ದೇ ಹೆಚ್ಚಿನ ಗಳಿಕೆ.

ಇಶಾನ್ ಪೊರೆಲ್ ಐದು ವಿಕೆಟ್ ಪಡೆದರೆ, ಆಕಾಶ್ ದೀಪ್ ಮೂರು ಮತ್ತು ಮುಕೇಶ್ ಕುಮಾರ್ ಎರಡು ವಿಕೆಟ್ ಪಡೆದೆರು.

Advertisement

ರಣಜಿ ಫೈನಲ್ ತಲುಪಬೇಕಾದರೆ ಕರ್ನಾಟಕ ಈ ಪಂದ್ಯ ಗೆಲ್ಲಲೇ ಬೇಕು. ಒಂದು ವೇಳೆ ಪಂದ್ಯ ಡ್ರಾಗೊಂಡರೂ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಬಂಗಾಲ ಫೈನಲ್ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next