Advertisement

ಟೀಮ್‌ ಇಂಡಿಯಾದಲ್ಲಿ ಪುನರಾಗಮನ ಪರ್ವ

09:55 AM Mar 10, 2020 | sudhir |

ಅಹ್ಮದಾಬಾದ್‌: ಸುನೀಲ್‌ ಜೋಶಿ ಸಾರಥ್ಯದ ನೂತನ ಆಯ್ಕೆ ಸಮಿತಿ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗಾಗಿ ರವಿವಾರ ಭಾರತ ತಂಡವನ್ನು ಅಂತಿಮಗೊಳಿಸಿತು. ನಾನಾ ಸಮಸ್ಯೆಗಳಿಂದ ಬೇರ್ಪಟ್ಟಿದ್ದ ಬಹುತೇಕ ಆಟಗಾರರು ತಂಡಕ್ಕೆ ಮರಳಿದ್ದು ಈ ಆಯ್ಕೆಯ ವಿಶೇಷ. ಇವರೆಂದರೆ ಆರಂಭಕಾರ ಶಿಖರ್‌ ಧವನ್‌, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತು ಪೇಸರ್‌ ಭುವನೇಶ್ವರ್‌ ಕುಮಾರ್‌.

Advertisement

ಇದೇ ವೇಳೆ ನ್ಯೂಜಿಲ್ಯಾಂಡ್‌ ಸರಣಿ ವೇಳೆ ಅಷ್ಟೇನೂ ಯಶಸ್ಸು ಕಾಣದ ಶಿವಂ ದುಬೆ, ಮಾಯಾಂಕ್‌ ಅಗರ್ವಾಲ್‌ ಮತ್ತು ಕೇದಾರ್‌ ಜಾಧವ್‌ ಅವರನ್ನು ಕೈಬಿಡಲಾಗಿದೆ. ಉಪನಾಯಕ ರೋಹಿತ್‌ ಇನ್ನೂ ಚೇತರಿಸದ ಕಾರಣ ಆಯ್ಕೆಗೆ ಪರಿಗಣಿಸಲ್ಪಡಲಿಲ್ಲ. ಹೀಗಾಗಿ ಪೃಥ್ವಿ ಶಾ ತಂಡದಲ್ಲಿ ಮುಂದುವರಿದಿದ್ದಾರೆ. ಪೇಸ್‌ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಅನುಭವಿ ಭುವನೇಶ್ವರ್‌ಗಾಗಿ ಶಾದೂìಲ್‌ ಠಾಕೂರ್‌ ಅವರನ್ನು ಕೈಬಿಡಲಾಯಿತು. 35ರ ಕೇದಾರ್‌ ಜಾಧವ್‌ ಅವರನ್ನು ಹೊರಗಿರಿಸಿದ ಕಾರಣ ಶುಭಮನ್‌ ಗಿಲ್‌ ಏಕದಿನ ತಂಡದಲ್ಲಿ ಸ್ಥಾನ ಪಡೆದರು.
ಸರಣಿಯ 3 ಪಂದ್ಯಗಳು ಧರ್ಮಶಾಲಾ (ಮಾ. 12), ಲಕ್ನೊ (ಮಾ. 15) ಮತ್ತು ಕೋಲ್ಕತಾದಲ್ಲಿ (ಮಾ. 18) ನಡೆಯಲಿವೆ.

ಪಾಂಡ್ಯ ಪ್ರಚಂಡ ಫಾರ್ಮ್
ಹಾರ್ದಿಕ್‌ ಪಾಂಡ್ಯ ಆಗಮನದಿಂದ ಭಾರತ ತಂಡದಲ್ಲಿ ಉತ್ತಮ ಸಮತೋಲನ ಕಂಡುಬರಲಿದೆ. ನ್ಯೂಜಿಲ್ಯಾಂಡ್‌ ಎದುರಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಪಾಂಡ್ಯ ಏಕದಿನ ಪಂದ್ಯವನ್ನು ಆಡಿಲ್ಲ. ಅವರು ಬೆನ್ನುನೋವಿನಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಡಿ.ವೈ. ಪಾಟೀಲ್‌ ಕಾರ್ಪೊರೇಟ್‌ ಕಪ್‌ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ನೈಜ ಆಟಕ್ಕೆ ಮುದುರಿಕೊಂಡಿದ್ದಾರೆ.

ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಪೃಥ್ವಿ ಶಾ, ಶುಭಮನ್‌ ಗಿಲ್‌, ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ, ನವದೀಪ್‌ ಸೈನಿ, ಕುಲದೀಪ್‌ ಯಾದವ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next