ನವದೆಹಲಿ: ಈ ವರ್ಷಾಂತ್ಯದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಲು ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿ ಭಾರತಕ್ಕೆ ಸಹಕಾರಿಯಾಗಿದೆ.
ಇದರ ಹೊರತಾಗಿಯೂ ಮುಂದಿನ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಎರಡು ಟಿ20 ಸರಣಿಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯೊಂದು ತಿಳಿಸಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತದಲ್ಲಿ ಎರಡು ಟಿ20 ಸರಣಿಗಳನ್ನು ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಗಳ ಜತೆ ಸಂವಹನ ನಡೆಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳು ಮುಂದೂಡಿಕೆ
ಆಸ್ಟ್ರೇಲಿಯ ಆತಿಥ್ಯದ 2022ರ ಟಿ20 ವಿಶ್ವಕಪ್‌ಗಾಗಿ ನಡೆಯಬೇಕಿದ್ದ ಪುರುಷರ ಏಷ್ಯಾ ಮತ್ತು ದ.ಆಫ್ರಿಕಾ ವಿಭಾಗದ ಮೂರು ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಐಸಿಸಿ ಮುಂದೂಡಿದೆ. ಕೊರೊನಾ ವೈರಸ್ ಹೆಚ್ಚಳವಾದ ಕಾರಣ ಈ ಅರ್ಹತಾ ಪಂದ್ಯಗಳನ್ನು ಮುಂದೂಡಿರುವುದಾಗಿ ಐಸಿಸಿ ಗುರುವಾರ ಹೇಳಿದೆ.
ಇವು ಬಹ್ರೇನ್, ಕುವೈತ್, ಮಾಲ್ಡೀವ್ಸ್, ಕತಾರ್ ಮತ್ತು ಸೌದಿ ಅರೇಬಿಯ ಮಧ್ಯೆ ಏ.3 ರಿಂದ 9ರವರೆಗೆ ನಡೆಯಬೇಕಿದ್ದ ಏಷ್ಯಾ “ಎ’ ಕ್ವಾಲಿಫೈಯರ್ ಪಂದ್ಯಗಳಾಗಿದ್ದವು. ಈ ಪಂದ್ಯಗಳಿನ್ನು ಅ.23ರಿಂದ 29ರವರೆಗೆ ಕುವೈತ್‌ನಲ್ಲಿ ನಡೆಯಲಿವೆ