Advertisement

Team India; ಟಿ20 ವಿಶ್ವಕಪ್ ಬಳಿಕ ಶ್ರೀಲಂಕಾಗೆ ತೆರಳಲಿದೆ ಟೀಂ ಇಂಡಿಯಾ

11:58 AM Nov 30, 2023 | Team Udayavani |

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಐಸಿಸಿ ಅಮಾನತಿನಲ್ಲಿ ಇರಿಸಿರಬಹುದು, ಆದರೆ ಭಾರತ ತಂಡ ಮುಂದಿನ ವರ್ಷ ಶ್ರೀಲಂಕಾ ಪ್ರವಾಸಕ್ಕೆ ಅಣಿಯಾಗಿದೆ. ಈ ಸಂದರ್ಭದಲ್ಲಿ 6 ಪಂದ್ಯಗಳ ಸೀಮಿತ ಓವರ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Advertisement

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಬಿಡುಗಡೆಗೊಳಿಸಿದ 2024ರ ಕ್ರಿಕೆಟ್‌ ಕ್ಯಾಲೆಂಡರ್‌ ಪ್ರಕಾರ ಭಾರತ ತಂಡ ಜುಲೈ-ಆಗಸ್ಟ್‌ ತಿಂಗಳಲ್ಲಿ ದ್ವೀಪರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 3 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

ಶ್ರೀಲಂಕಾ ಮಂಡಳಿಯು ಇಡೀ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಮಾಡಿದೆ. ಅದರಂತೆ ಜನವರಿಯಲ್ಲಿ ಜಿಂಬಾಬ್ವೆ ತಂಡ ಮೂರು ಏಕದಿನ, ಮೂರು ಟಿ20, ಜನವರಿ-ಫೆಬ್ರವರಿಯಲ್ಲಿ ಆಫ್ಘಾನಿಸ್ತಾನವು ಒಂದು ಟೆಸ್ಟ್‌, 3 ಏಕದಿನ, 3 ಟಿ20, ಫೆಬ್ರವರಿ-ಮಾರ್ಚ್‌ನಲ್ಲಿ ಬಾಂಗ್ಲಾದೇಶವು 2 ಟೆಸ್ಟ್‌, 3 ಏಕದಿನ, 3 ಟಿ20, ಜೂನ್‌-ಜುಲೈ ನಲ್ಲಿ ಐಸಿಸಿ ಟಿ20 ವಿಶ್ವಕಪ್‌, ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ ಮೂರು ಟೆಸ್ಟ್‌, ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್‌ 2 ಟೆಸ್ಟ್‌, ಅಕ್ಟೋಬರ್‌ನಲ್ಲಿ ವೆಸ್ಟ್‌ ಇಂಡೀಸ್‌ 3 ಏಕದಿನ ಮತ್ತು 3 ಟಿ20, ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ 3 ಏಕದಿನ, 3 ಟಿ20, ನವೆಂಬರ್‌-ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ 2 ಟೆಸ್ಟ್‌, ಡಿಸೆಂಬರ್‌- 2025ರ ಜನವರಿಯಲ್ಲಿ ನ್ಯೂಜಿಲೆಂಡ್‌ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next