Advertisement

ಜುಲೈನಲ್ಲಿ ಟೀಂ ಇಂಡಿಯಾದಿಂದ ವಿಂಡೀಸ್ ಪ್ರವಾಸ: ವೇಳಾಪಟ್ಟಿ ಬಿಡುಗಡೆ

09:39 AM Jun 02, 2022 | Team Udayavani |

ಮುಂಬೈ: ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಕೂಟಕ್ಕೆ ಸಿದ್ದತೆಯಲ್ಲಿ ತೊಡಗಿರುವ ಟೀಂ ಇಂಡಿಯಾ ಜುಲೈ ಅಂತ್ಯದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಾಗಿದೆ. ಕೆರಿಬಿಯನ್ ನಲ್ಲಿ ಭಾರತ ತಂಡವು ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನಾಡಲಿದೆ.

Advertisement

ಜುಲೈ 22ರಿಂದ ಆಗಸ್ಟ್ 7ರವರೆಗೆ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನಾಡಲಿದೆ.

ಏಕದಿನ ಸರಣಿ ಮತ್ತು ಮೂರು ಟಿ20 ಪಂದ್ಯಗಳನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಸೇಂಟ್ ಕಿಟ್ಸ್ & ನೆವಿಸ್‌ನಲ್ಲಿ ಆಯೋಜಿಸಲಾಗುವುದು. ಅಂತಿಮ ಎರಡು ಟಿ20 ಪಂದ್ಯಗಳು ಅಮೇರಿಕದ ಫ್ಲೋರಿಡಾದ ಫೋರ್ಟ್ ಲಾಡರ್‌ಹಿಲ್‌ನಲ್ಲಿ ನಡೆಯಲಿದೆ.

ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 22, 24 ಮತ್ತು 27 ರಂದು ಪೋರ್ಟ್ ಆಫ್ ಸ್ಪೇನ್‌ ನ ಪ್ರಸಿದ್ಧ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿವೆ.

ಇದನ್ನೂ ಓದಿ:ಇಂದಿನಿಂದ ಲಾರ್ಡ್ಸ್‌ ಟೆಸ್ಟ್‌: ತಂಡಕ್ಕೆ ಮರಳಿದ ಬ್ರಾಡ್‌, ಆ್ಯಂಡರ್ಸನ್‌

Advertisement

ಮೊದಲ ಟಿ20 ಪಂದ್ಯ ಜುಲೈ 29 ರಂದು ಪೋರ್ಟ್ ಆಫ್ ಸ್ಪೇನ್ ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಆಗಸ್ಟ್ 1 ಮತ್ತು 2 ರಂದು ಸೇಂಟ್ ಕಿಟ್ಸ್ ವಾರ್ನರ್ ಪಾರ್ಕ್‌ನಲ್ಲಿ ಎರಡು ಟಿ20 ಪಂದ್ಯಗಳು ನಡೆಯಲಿವೆ. ಅಂತಿಮ ಎರಡು ಪಂದ್ಯಗಳು ಆಗಸ್ಟ್ 6 ಮತ್ತು 7 ರಂದು ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಪೂರ್ಣ ಕೂಟ ಫ್ಯಾನ್ ಕೋಡ್ ನಲ್ಲಿ ನೇರಪ್ರಸಾರವಾಗಲಿದೆ.

ಜೂನ್ 9ರಂದು ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸ ನಡೆಸಲಿದೆ. ಜುಲೈ 17ರಂದು ಇಂಗ್ಲೆಂಡ್ ಪ್ರವಾಸ ಅಂತ್ಯವಾಗಲಿದ್ದು, ನಂತರ ವೆಸ್ಟ್ ಇಂಡೀಸ್ ವಿಮಾನ ಹತ್ತಲಿದೆ.

Advertisement

Udayavani is now on Telegram. Click here to join our channel and stay updated with the latest news.

Next