Advertisement
ಈ ಅಂಗಳದಲ್ಲಿ ಐತಿಹಾಸಿಕ 100ನೇ ಟೆಸ್ಟ್ ಆಡುತ್ತಿರುವ ಕೊಹ್ಲಿ ಸೇರಿದಂತೆ ತಂಡದ ಬಹುತೇಕ ಆಟಗಾರರು ಅಭ್ಯಾಸ ದಲ್ಲಿ ತೊಡಗಿದರು. ಜಸ್‌ಪ್ರೀತ್ ಬುಮ್ರಾ, ಶುಭಮನ್ ಗಿಲ್, ಹನುಮ ವಿಹಾರಿ, ಉಮೇಶ್ ಯಾದವ್, ಕುಲದೀಪ್ ಯಾದವ್, ಮಾಯಾಂಕ್ ಅಗರ್ವಾಲ್ ಅವರೆಲ್ಲ ನೆಟ್ ಪ್ರಾಕ್ಟೀಸ್ ನಡೆಸಿದ ಪ್ರಮುಖರು. ಅಶ್ವಿನ್ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದು, ಇದರಲ್ಲಿ ತೇರ್ಗಡೆಯಾದರಷ್ಟೇ ಆಯ್ಕೆಗೆ ಲಭ್ಯರಿರುತ್ತಾರೆ. ಈ ಪಂದ್ಯ ಇನ್ನೂ ಎರಡು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಇದು ರೋಹಿತ್ ಶರ್ಮ ನಾಯಕತ್ವದ ಮೊದಲ ಟೆಸ್ಟ್ ಪಂದ್ಯ. ಹಾಗೆಯೇ ಶ್ರೀಲಂಕಾದ 300ನೇ ಟೆಸ್ಟ್ ಪಂದ್ಯವೂ ಹೌದು.
ಎಲ್ಲ ದಿಕ್ಕುಗಳಿಂದ ಎದುರಾದ ಪ್ರತಿರೋಧದ ಬಳಿಕ ತನ್ನ ನಿಲುವನ್ನು ಬದಲಿಸಿದ ಬಿಸಿಸಿಐ ಮೊಹಾಲಿ ಟೆಸ್ಟ್ ಪಂದ್ಯಕ್ಕೆ ವೀಕ್ಷಕರ ನಿರ್ಬಂಧವನ್ನು ತೆರವುಗೊಳಿಸಿದೆ. ಶೇ. 50ರಷ್ಟು ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲು ನಿರ್ಧರಿಸಿದೆ.