ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ 2023ರ ಮೊದಲ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನೂ ಗೆದ್ದುಕೊಂಡಿರುವ ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ತಾನಾಡಿರುವ ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ಕಿವೀಸ್ ಭಾರತಕ್ಕೆ ಪ್ರಬಲ ಎದುರಾಳಿಯಾಗಿದೆ.
ಅಕ್ಟೋಬರ್ 22ದಂದು ಧರ್ಮಶಾಲಾದಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್ ಪಂದ್ಯದಿಂದ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾಂಡ್ಯ ಅವರ ಎಡ ಹಿಮ್ಮಡಿಗೆ ಗಾಯವಾಗಿತ್ತು. ಆಟದ ಮೊದಲ ಓವರ್ ಬೌಲಿಂಗ್ ಮಾಡುವಾಗ, ಆಲ್ ರೌಂಡರ್ ಸ್ಲಿಪ್ ಆದರು. ಕೂಡಲೇ ಅವರನ್ನು ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಯಿತು. ಬಳಿಕ ಪಂದ್ಯದಲ್ಲಿ ಅವರ ಭಾಗವಹಿಸಲಿಲ್ಲ.
ಪಂದ್ಯದ ವೇಳೆ ಪಾಂಡ್ಯ ಅವರನ್ನು ಸ್ಕ್ಯಾನ್ ಮಾಡಲು ಕಳುಹಿಸಲಾಗುತ್ತಿದೆ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇನ್ನು ಮುಂದೆ ಭಾಗವಹಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಟದ ಸಮಯದಲ್ಲಿ ತಿಳಿಸಿತ್ತು,
ಆಲ್‌ರೌಂಡರ್ ಧರ್ಮಶಾಲಾಗೆ ಪ್ರಯಾಣಿಸುವುದಿಲ್ಲ ಮತ್ತು ವೈದ್ಯಕೀಯ ಸಹಾಯಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗುತ್ತಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಭಾರತ ಏಕದಿನ ವಿಶ್ವಕಪ್ ನ ಐದನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.
ಲಕ್ನೋದಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ.
“ಅವರು ಅಕ್ಟೋಬರ್ 20 ರಂದು ತಂಡದೊಂದಿಗೆ ಧರ್ಮಶಾಲಾಗೆ ಪ್ರಯಾಣ ಮಾಡುವುದಿಲ್ಲ, ಭಾರತವು ಇಂಗ್ಲೆಂಡ್ ವಿರುದ್ಧ ಆಡುವ ಲಕ್ನೋದಲ್ಲಿ ಆಡುವಾಗ ಅವರು ನೇರವಾಗಿ ತಂಡವನ್ನು ಸೇರಿಕೊಳ್ಳುತ್ತಾರೆ” ಎಂದು ಬಿಸಿಸಿಐ ಹೇಳಿದೆ.