Advertisement
1984ರ ನ್ಯೂಯಾರ್ಕ್-ಸ್ಟೋಕ್ ಮಾಂಡೆವಿಲ್ಲೆ ಕೂಟದಲ್ಲಿ ಜೋಗಿಂದರ್ ಬೇಡಿ ಪದಕಗಳ ಹ್ಯಾಟ್ರಿಕ್ ಸಾಧಿಸಿದ್ದು ವಿಶೇಷ. ಅಂದು ಅವರು ಮೂರು ಕ್ರೀಡೆ ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಶಾಟ್‌ಪುಟ್‌ನಲ್ಲಿ ಬೆಳ್ಳಿ, ಡಿಸ್ಕಸ್ ತ್ರೋ ಮತ್ತು ಜಾವೆಲಿನ್ ತ್ರೋನಲ್ಲಿ ಕಂಚಿನ ಪದಕ ಗೆದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಪದಕ ಗೆದ್ದ ಭಾರತದ ದಾಖಲೆ ಬೇಡಿ ಹೆಸರಲ್ಲಿದೆ.
Related Articles
Advertisement
ಇದೇ ಕೂಟದಲ್ಲಿ ರಾಜೀಂದರ್ ಸಿಂಗ್ ರಹೆಲು 56 ಕೆಜಿ ಪವರ್‌ಲಿಫ್ಟಿಂಗ್‌ನಲ್ಲಿ 157.5 ಕೆಜಿ ಸಾಧನೆಯೊಂದಿಗೆ ಕಂಚು ಗೆದ್ದರು.
2012: ಗಿರೀಶ್ ಏಕೈಕ ಸಾಧಕ:
ಲಂಡನ್‌ನಲ್ಲಿ ಗಿರೀಶ್ ನಾಗರಾಜೇ ಗೌಡ ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಏಕೈಕ ಪದಕ ತಂದಿತ್ತರು. ಅಂದಿನ ಗಿರೀಶ್ ಸಾಧನೆ 1.74 ಮೀ. ಇವರು ಕರ್ನಾಟಕದವರೆಂಬುದು ಅಭಿಮಾನದ ಸಂಗತಿ.
ಜಜಾರಿಯಾ ಜತೆಗೆ ತಂಗವೇಲು:
2016ರ ರಿಯೋ ಗೇಮ್ಸ್‌ನಲ್ಲಿ ಭಾರತಕ್ಕೆ ಅವಳಿ ಬಂಗಾರದ ಸಂಭ್ರಮ. ಜಾವೆಲಿನ್‌ನಲ್ಲಿ ಮತ್ತೆ ದೇವೇಂದ್ರ ಜಜಾರಿಯಾ, ಹೈಜಂಪ್‌ನಲ್ಲಿ ಮರಿಯಪ್ಪನ್ ತಂಗವೇಲು ಹರುಷ ಉಕ್ಕಿಸಿದರು. ಜಜಾರಿಯಾ ಭಾರತಕ್ಕೆ ಎರಡು ಚಿನ್ನ ತಂದಿತ್ತ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾದರು. ತಂಗವೇಲು 1.89 ಮೀ. ಎತ್ತರಕ್ಕೆ ನೆಗೆದು ಬಂಗಾರಕ್ಕೆ ಕೈಯೊಡ್ಡಿದರು. ಕಂಚಿನ ಪದಕ ಭಾರತದ ಮತ್ತೋರ್ವ ಹೈಜಂಪರ್ ವರುಣ್ ಸಿಂಗ್ ಭಾಟಿ ಪಾಲಾಯಿತು.
ದೀಪಾ ಮಲಿಕ್ ಶಾಟ್‌ಪುಟ್‌ನಲ್ಲಿ ಬೆಳ್ಳಿ ಗೆದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ವನಿತಾ ಕ್ರೀಡಾಪಟು ಎಂಬುದು ದೀಪಾ ಹೆಗ್ಗಳಿಕೆ.
ಸೈನಿಕನಿಂದ ಮೊದಲ ಚಿನ್ನ :
ಭಾರತಕ್ಕೆ ಮೊದಲ ಪ್ಯಾರಾಲಿಂಪಿಕ್ಸ್ ಪದಕ ತಂದಿತ್ತ ಹೆಗ್ಗಳಿಕೆ ಮುರಳೀಕಾಂತ್ ಪೇಟ್ಕರ್ ಅವರದು. 1972ರ ಹೈಡೆಲ್‌ಬರ್ಗ್ ಕೂಟದ 50 ಮೀ. ಫ್ರೀಸ್ಟೈಲ್ ಸ್ವಿಮ್ಮಿಂಗ್‌ನಲ್ಲಿ ಅವರು 37.33 ಸೆಕೆಂಡ್ಸ್ ಗಳ ದಾಖಲೆಯೊಂದಿಗೆ ಬಂಗಾರದೊಂದಿಗೆ ಮಿನುಗಿದರು. ಭಾರತೀಯ ಸೇನೆಯಲ್ಲಿದ್ದ ಪೇಟ್ಕರ್ ಆರಂಭದಲ್ಲಿ ಬಾಕ್ಸರ್ ಆಗಿದ್ದರು. 1965ರ ಭಾರತ-ಪಾಕಿಸ್ಥಾನ ಯುದ್ಧದ ವೇಳೆ ತೋಳಿಗೆ ಪೆಟ್ಟು ಬಿದ್ದ ಕಾರಣ ಬೇರೆ ಕ್ರೀಡೆಯತ್ತ ಹೊರಳಿದರು.