Advertisement

ಮಹಿಳಾ ಟಿ ಟ್ವೆಂಟಿ ವಿಶ್ವಕಪ್: ಹೊಸ ಮುಖಗಳಿಗೆ ಮಣೆ ಹಾಕಿದ ಟೀಂ ಇಂಡಿಯಾ

09:54 AM Jan 13, 2020 | keerthan |

ಮುಂಬೈ: ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವನಿತೆಯರ ಟಿ ಟ್ವೆಂಟಿ ವಿಶ್ವಕಪ್ ಗೆ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ಹರ್ಮನ್ ಪ್ರೀತ್ ಕೌರ್ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧನಾ ಉಪನಾಯಕಿಯಾಗಿರಲಿದ್ದಾರೆ.

Advertisement

ಇದವರೆಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದ ಬಂಗಾಳ ಮೂಲದ ರಿಚಾ ಘೋಶ್ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಬಂದಿದೆ. ಅದೂ ಕೂಡಾ ವಿಶ್ವಕಪ್ ನಂತಹ ದೊಡ್ಡ ಕೂಟಕ್ಕೆ ಆಯ್ಕೆ ಮಾಡಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

ರಿಚಾ ಘೋಶ್ ಅವರು ಇತ್ತೀಚಗೆ ನಡೆದ ವನಿತಾ ಚಾಲೆಂಜರ್ ಟ್ರೋಫಿ ಕೂಟದಲ್ಲಿ 26 ಎಸೆಗಳಲ್ಲಿ 36 ರನ್ ಗಳಿಸಿದ್ದರು. ಈ ಇನ್ನಿಂಗ್ಸ್ ನಲ್ಲಿ ಘೋಶ್ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದರು.

ಫೆಬ್ರವರಿ 21ರಂದು ಸಿಡ್ನಿ ಮೈದಾನದಲ್ಲಿ ಆಸೀಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಭಾರತದ ಗುಂಪಿನಲ್ಲಿ ಆಸೀಸ್ ನೊಂದಿಗೆ, ಬಾಂಗ್ಲಾದೇಶ್, ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ತಂಡಗಳಿವೆ.ಸ

ತಂಡ:

Advertisement

ಹರ್ಮನ್ ಪ್ರೀತ್ ಕೌರ್ , ಸ್ಮ್ರತಿ ಮಂಧನಾ, ಶಿಫಾಲಿ ವರ್ಮಾ, ಜೆಮಿಮಾ ರೋಡ್ರಿಗಜ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದಾ ಕೃಷ್ಣಮೂರ್ತಿ, ರಿಚಾ ಘೋಶ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧ ಯಾದವ್, ರಾಜೇಶ್ವರಿ ಗಾಯಕ್ವಾಡ್,  ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ.

Advertisement

Udayavani is now on Telegram. Click here to join our channel and stay updated with the latest news.

Next