Advertisement
ಭಾರತ ನೀಡಿದ 201 ರನ್ ಗಳ ಸವಾಲನ್ನು ಬೆನ್ನಟ್ಟಿದ ಮಾಲಿಂಗ ಪಡೆಗೆ ಭಾರತದ ವೇಗಿಗಳು ಪ್ರಾರಂಭದಲ್ಲೇ ಆಘಾತ ನೀಡಿದರು. ಪರಿಣಾಮ ಶ್ರೀಲಂಕಾ ತಂಡದ ಮೊತ್ತ 26 ರನ್ ಗಳಾಗುವಷ್ಟರಲ್ಲಿ ಪ್ರಮುಖ 04 ವಿಕೆಟ್ ಗಳು ಹಾರಿದ್ದವು, ಅದೂ ಕೇವಲ 5.1 ಓವರ್ ಗಳಲ್ಲಿ! ಅಂತಿಮವಾಗಿ ಶ್ರೀಲಂಕಾ 15.5 ಓವರ್ ಗಳಲ್ಲಿ 123 ರನ್ ಗಳಿಗೆ ಆಲೌಟಾಗುವ ಮೂಲಕ 78 ರನ್ ಗಳಿಂದ ಭಾರತಕ್ಕೆ ಶರಣಾಯಿತು.ಗೌಹಾತಿಯಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಬಳಿಕ ಇಂಧೋರ್ ನಲ್ಲಿ ನಡೆದ ಎರಡನೇ ಟಿ20 ಯನ್ನು ಭಾರತ 07 ವಿಕೆಟ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಸರಣಿ ಸಮಬಲ ಸಾಧಿಸಲು ಮಾಲಿಂಗ ಪಡೆಗೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.