Advertisement

ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ

05:59 PM Apr 13, 2020 | Karthik A |

ಮೌಂಟ್ ಮೌಂಗನುಯಿ: ಸರ್ವಾಂಗೀಣ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಟಗಾರರು ನ್ಯೂಝಿಲ್ಯಾಂಡ್ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಮಣಿಸುವ ಮೂಲಕ ಕಿವೀಸ್ ನೆಲದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿರುವ ಕೊಹ್ಲಿ ಪಡೆ ಇನ್ನೂ 2 ಏಕದಿನ ಪಂದ್ಯಗಳು ಬಾಕಿಯಿರುವಂತೆಯೇ ಏಕದಿನ ಸರಣಿಯನ್ನು ಕೈವಶಪಡಿಸಿಕೊಂಡಿವೆ.

Advertisement


ನ್ಯೂಝಿಲ್ಯಾಂಡ್ ನೀಡಿದ 243 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ (62), ವಿರಾಟ್ ಕೊಹ್ಲಿ (60), ಅಂಬಟಿ ರಾಯಡು (ಅಜೇಯ 40) ಮತ್ತು ದಿನೇಶ್ ಕಾರ್ತಿಕ್ (ಅಜೇಯ 38) ಅವರ ಭರ್ಜರಿ ಆಟದ ನೆರವಿನಿಂದ 43 ಓವರುಗಳಲ್ಲಿ 3 ವಿಕೆಟುಗಳನ್ನು ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಈ ಮೂಲಕ ಕಿವೀಸ್ ನೆಲದಲ್ಲಿ ತನ್ನ ಸಾರ್ವಕಾಲಿಕ ಗೆಲುವಿನ ಪ್ರದರ್ಶನವನ್ನು ಟೀಂ ಇಂಡಿಯಾ ದಾಖಲಿಸಿತು. ಆರಂಭಿಕ ಆಟಗಾರ ಶಿಖರ್ ಧವನ್ 28 ರನ್ನುಗಳನ್ನು ಗಳಿಸಿದರು.

ಕಿವೀಸ್ ಪರ ವೇಗಿ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರೆ ಇನ್ನೊಂದು ವಿಕೆಟ್ ಎಡಗೈ ಸ್ಪಿನ್ನರ್ ಸಾಂಟ್ನರ್ ಪಾಲಾಯಿತು.


Advertisement

Udayavani is now on Telegram. Click here to join our channel and stay updated with the latest news.

Next