ರಾಮನಗರ: ವರ್ಗಾವಣೆ ದಂಧೆ ಕೇಳಿದ್ದೀರಿ, ಸಸ್ಪೆಂಡ್ ಕೂಡ ಒಂದು ದಂಧೆ ಅಂತ ಕೇಳಿದ್ದೀರಾ? ಆಶ್ಚರ್ಯ ಬೇಡ! ಸಸ್ಪೆಂಡ್ ಒಂದು ದಂಧೆ ಅಂತ ನೇರಾನೇರ ಆರೋಪಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಜಿಪಂ ಸದಸ್ಯ ಶಿವಕುಮಾರ್ ತರಾಟೆಗೆ ತೆಗೆದುಕೊಂಡರು. ನಗರದ ಜಿಪಂ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ 17ನೇ ಸಾಮಾನ್ಯ ಸಭೆ ಯಲ್ಲಿ ಕನಕಪುರದ ದೊಡ್ಡಾಲಹಳ್ಳಿ ಕ್ಷೇತ್ರದ ಸದಸ್ಯ ಶಿವಕುಮಾರ್, ಶಿಕ್ಷಣ ಇಲಾಖೆಯಲ್ಲಿ ಸಸ್ಪೆಂಡ್ ಡೋದು ಮತ್ತು ರಿಇನ್‌ಸ್ಟೆಟ್ ಮಾಡೋದು ಒಂದು ದಂಧೆಯಾಗಿದೆ.
ಯಾವುದೋ ಕಾರಣಕ್ಕೆ ಸಸ್ಪೆಂಡ್ ಆದ ಶಿಕ್ಷ ಕನನ್ನು ಅದೇ ಶಾಲೆಯಲ್ಲಿ ಮುಂದುವರಿಸುವಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಶಿಕ್ಷಕ ಕೇಳಿದ ಕ್ಷೇತ್ರಕ್ಕೆ ನಿಯೋಜಿಸುವುದು ನಡೆ ದಿದೆ ಎಂದು ದೂರಿದರು. ಮಾಗಡಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಶಿಕ್ಷ ಕರೊಬ್ಬರು ಕನಕಪುರ ತಾಲೂಕಿನ ಹುಲಿಮಲೆ ಸರ್ಕಾರಿ ಶಾಲೆಗೆ ಮುಖ್ಯಶಿಕ್ಷಕನಾಗಿ ವರ್ಗಾವಣೆಯಾಗಿದ್ದರು. ಅವರು ಸಮಯಕ್ಕೆ ಸರಿ ಯಾಗಿ ಬರ್ತಿಲ್ಲ ಅಂತ ಸಸ್ಪೆಂಡ್ ಆಗಿದ್ದರು.
ಕೆಲ ದಿನಗಳ ನಂತರ ರಿಇನ್‌ಸ್ಟೆàಟ್ ಆಗಿದ್ದರು. ಆಗ ಅವರನ್ನು ಮತ್ತೆ ಮಾಗಡಿಯ ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಜಿಲ್ಲೆ ಯಲ್ಲಿ 105 ಸಸ್ಪಂಡ್ ಪ್ರಕರಣಗಳಿವೆ. ಈ ಪೈಕಿ 98 ಪ್ರಕರಣಗಳನ್ನು ನಿರ್ದೋಷಿ ಎಂದು ಪರಿ ಗಣಿಸಲಾಗಿದೆ ಎಂದು ವಿವರಿಸಿದರು. ಅದಕ್ಕೆ ದನಿಗೂಡಿಸಿದ ಸದಸ್ಯೆ ಬಿ.ಎನ್. ದಿವ್ಯಾ, ಸದರಿ ಮುಖ್ಯ ಶಿಕ್ಷಕ ಈಗ ಮಾಗಡಿಯಲ್ಲಿ ತನ್ನ ಮನೆಯಿಂದ ಕೇವಲ 100 ಮೀ. ಅಂತರದ ಶಾಲೆಯಲ್ಲಿ ಕರ್ತವ್ಯಕ್ಕೆ ಹೋಗ್ತಿದ್ದಾರೆ ಎಂದರು.
ಸಭೆಯಲ್ಲಿ ಹಾಜರಿ ದ್ದ ಶಾಸಕ ಎ.ಮಂಜುನಾಥ್ ಸಹ ಸದರಿ ಶಿಕ್ಷಕನನ್ನು ವರ್ಗಾವಣೆಯಾದ ಸ್ಥಳಕ್ಕೆ ಮತ್ತೆ ಕಳುಹಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಸೋಮಶೇಖರಯ್ಯ, ಸದರಿ ಮುಖ್ಯ ಶಿಕ್ಷಕರನ್ನು ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಶಿಪಾರಸಿನ ಮೇರೆಗೆ ಸಸ್ಪೆಂಡ್ ಮಾಡಲಾಗಿದೆ. ತಮ್ಮ ಅವಧಿಯಲ್ಲಿ ಕೇವಲ 4 ಸಸ್ಪೆಂಡ್ ಪ್ರಕರಣಗಳಿವೆ. ರಿಇನ್‌ಸ್ಟೆàಟ್ ಆದ ನಂತರ ಅವರನ್ನು ಮಾಗಡಿಗೆ ತತ್ಕಾಲಿಕವಾಗಿ ನಿಯೋಜಿಸಲಾಗಿದೆ ಎಂದರು.
ಕರ್ನಾಟಕ ಪಬ್ಲಿಕ್ ಶಾಲೆ ಅವ್ಯವಸ್ಥೆ ಪ್ರತಿಧ್ವನಿ: ಕೆಪಿಎಸ್‌ಗಳ ಅವ್ಯವಸ್ಥೆ ಬಗ್ಗೆ ಜಿಪಂ ಸಭೆಯಲ್ಲಿ ಪ್ರತಿಧ್ವನಿಸಿತು. ಸದಸ್ಯ ಶಿವಕುಮಾರ್ ತಮ್ಮ ಕ್ಷೇತ್ರದ ಪಬ್ಲಿಕ್ ಶಾಲೆಯಲ್ಲಿ ಖಾಲಿಯಿರುವ ಶಿಕ್ಷಕರ ಬಗ್ಗೆ ಪ್ರಸ್ತಾಪಿಸಿದರು. 32 ಕೊಠಡಿಯಿರುವ ಬೃಹತ್ ಪಬ್ಲಿಕ್ ಶಾಲೆಯಲ್ಲಿ ಕೇವಲ 400 ವಿದ್ಯಾರ್ಥಿಗಳಿದ್ದಾರೆ. ಪಕ್ಕದ ಖಾಸಗಿ ಶಾಲೆಯಲ್ಲಿ 700 ವಿದ್ಯಾರ್ಥಿಗಳಿದ್ದಾರೆ.
ಕಾರಣ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ ಎಂದು ಶಿಕ್ಷಣ ಇಲಾಖೆಯನ್ನು ಮತ್ತೆ ತರಾಟೆಗೆ ತೆಗೆದು ಕೊಂಡರು. ಪಬ್ಲಿಕ್ ಶಾಲೆಯಲ್ಲಿ ಪಿಯೂಸಿಯಲ್ಲಿ ಕಲೆ ಮತ್ತು ವಾಣಿಜ್ಯ ತರಗತಿಗಳು ಮಾತ್ರ ಮಂಜೂರಾಗಿದೆ. ಆದರೆ ಸದರಿ ವಿಷಯ ಬೋಧಿಸಲು ಶಿಕ್ಷಕರನ್ನೇ ನಿಯೋಜಿಸಿಲ್ಲ ಎಂದು ದೂರಿದರು. ಕೆ.ಪಿ. ಶಾಲೆಗಳಲ್ಲಿ ಪ್ರಾಂಶುಪಾಲರು ಪಿಯು ಶಿಕ್ಷಣ ಇಲಾಖೆಗೆ ಒಳಪಡುತ್ತಾರೆ. ಹೀಗಾಗಿ ಅವರನ್ನು ಕರೆಸಿ ಚರ್ಚಿಸಿ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಪಂ ಉಪಾಧ್ಯಕ್ಷೆ ಉಷಾರವಿ ಇದ್ದರು.
ಶಿಕ್ಷೆ ಕೊಟ್ಟಂಗೆ ಆಗಿಲ್ಲ: ಸಿಇಒ ಸಸ್ಪೆಂಡ್ ದಂಧೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಇಒ ಇಕ್ರಂ ಮಾತನಾಡಿ, ಶಿಕ್ಷಕ ತಾನು ಕೇಳಿದ ಸ್ಥಳಕ್ಕೆ ನಿಯೋಜನೆ ಮಾಡಿದರೆ ಸಸ್ಪೆಂಡ್‌ಗೆ ಅರ್ಥವೇ ಇಲ್ಲ. ಶಿಕ್ಷೆ ತಪ್ಪಿಸಿ ಅನುಕೂಲ ಮಾಡಿಕೊಟ್ಟಂಗೆ ಆಗಿದೆ ಎಂದರು.
ಸಿಇಒ ಬಳಿ ಚರ್ಚಿಸಲು ಅಧ್ಯಕ್ಷರ ಸೂಚನೆ: ಜಿಪಂ ಅಧ್ಯಕ್ಷ ಎಚ್.ಬಸಪ್ಪ, ಸಸ್ಪೆಂಡ್‌ನಂತರ ರಿಇನ್‌ಸ್ಟೇಟ್ ಆಗುವ ಶಿಕ್ಷಕರನ್ನು ಎಲ್ಲಿ ನಿಯೋಜಿಸಬೇಕು ಎಂಬ ವಿಚಾರದಲ್ಲಿ ಸಿಇಒ ಅಥವಾ ಶಿಕ್ಷಣ ಸ್ಥಾಯಿ ಸಮಿತಿಯ ಸಲಹೆ ಪಡೆದು ನಿಯೋಜಿಸಿ ಎಂದು ಸೂಚನೆ ಕೊಟ್ಟರು.