Advertisement

ಶಿಕ್ಷಕರ ನೇಮಕಾತಿ ಪರೀಕ್ಷೆ ದ.ಕ.: 1,606 ಅಭ್ಯರ್ಥಿಗಳು ಗೈರು

09:42 PM May 22, 2022 | Team Udayavani |

ಮಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ಎರಡನೇ ದಿನದ ಪರೀಕ್ಷೆ ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ 22 ಕೇಂದ್ರಗಳಲ್ಲಿ ಸುಗಮವಾಗಿ ನಡೆಯಿತು.

Advertisement

ಎರಡನೇ ದಿನದ ಪರೀಕ್ಷೆಗೆ 1,606 ಮಂದಿ ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ರವಿವಾರ ಬೆಳಗ್ಗೆ ಸಮಾಜ ವಿಜ್ಞಾನ, ಗಣಿತ/ ವಿಜ್ಞಾನ, ಜೀವ ವಿಜ್ಞಾನ, ಕನ್ನಡಕ್ಕೆ 4,638 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 3,036 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. 1,602 ಮಂದಿ ಗೈರಾಗಿದ್ದಾರೆ. ಅದೇ ರೀತಿಯಲ್ಲಿ ಮಾಧ್ಯಮ ಭಾಷಾ ಪರೀಕ್ಷೆಗೆ 4,638 ಮಂದಿಯಲ್ಲಿ 3,032 ಮಂದಿ ಪರೀಕ್ಷೆ ಬರೆದು 1,606 ಮಂದಿ ಗೈರು ಹಾಜರಾಗಿದ್ದಾರೆ.

ಉಡುಪಿ: 313 ಮಂದಿ ಗೈರು
ಉಡುಪಿ: ಜಿಲ್ಲೆಯಲ್ಲಿ ರವಿವಾರ ನಡೆದ ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಪತ್ರಿಕೆ-1 ಮತ್ತು ಪತ್ರಿಕೆ-2ಕ್ಕೆ ನೋಂದಾಯಿಸಿದ್ದ 1,459 ಅಭ್ಯರ್ಥಿಗಳಲ್ಲಿ 1,146 ಅಭ್ಯರ್ಥಿಗಳು ಹಾಜರಾಗಿದ್ದು, 313 ಮಂದಿ ಗೈರು ಹಾಜರಾಗಿದ್ದಾರೆ.

ಪರೀಕ್ಷೆಯು ಉಡುಪಿಯ ಸರಕಾರಿ ಪ್ರೌಢಶಾಲೆ ಒಳಕಾಡು, ಕ್ರಿಶ್ಚಿಯನ್‌ ಹೈಸ್ಕೂಲ್‌ ಮಿಷನ್‌ ಹಾಸ್ಪಿಟಲ್‌ ರಸ್ತೆ, ಸರಕಾರಿ ಪ.ಪೂ.ಕಾಲೇಜು (ಪ್ರೌಢಶಾಲಾ ವಿಭಾಗ), ಸರ್ವಿಸ್‌ ಬಸ್‌ ನಿಲ್ದಾಣದ ಸರಕಾರಿ ಪ.ಪೂ.ಕಾಲೇಜು (ಪ್ರೌಢಶಾಲಾ ವಿಭಾಗ), ಯು. ಕಮಲಾಬಾಯಿ ಹೈಸ್ಕೂಲ್‌ ಕಡಿಯಾಳಿ, ಆದಿ ಉಡುಪಿ ಹೈಸ್ಕೂಲ್‌ಗ‌ಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಯಾವುದೇ ಗೊಂದಲ, ಅಕ್ರಮ ನಡೆದಿಲ್ಲ ಎಂದು ಡಿಡಿಪಿಐ ಗೋವಿಂದ ಮಡಿವಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next