Advertisement

ಸಾರ್ವತ್ರಿಕ ಕುಟುಂಬ ಸಮೀಕ್ಷೆಯಲ್ಲಿ ಶಿಕ್ಷಕರು!

01:59 AM May 12, 2020 | Sriram |

ಉಡುಪಿ: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಮೇ 6ರಿಂದ ಅವಿಭಜಿತ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಮತಗಟ್ಟೆ ಬಿಎಲ್‌ಒಗಳ ಜತೆ ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ 2,000 ಹಾಗೂ ಉಡುಪಿಯಲ್ಲಿ 1,000 ಮಂದಿ ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಿಎಲ್‌ಒ ಜತೆ ಪಾಲ್ಗೊಳ್ಳುವ ಶಿಕ್ಷಕರಿಗೆ ದ.ಕ.ದಲ್ಲಿ ತರಬೇತಿ ನೀಡಿಲ್ಲ ಎಂಬ ಬಗ್ಗೆ ಆರಂಭದಲ್ಲಿ ಗೊಂದಲ ಏರ್ಪಟ್ಟಿತ್ತು. ಬಿಎಲ್‌ಒಗಳ ಜತೆ ಸಹಾಯಕರಾಗಿ ಪಾಲ್ಗೊಳ್ಳುತ್ತಿರುವುದರಿಂದ ಶಿಕ್ಷಕ ರಲ್ಲಿದ್ದ ಗೊಂದಲ ಅನಂತರ ನಿವಾರಣೆ ಆಗಿತ್ತು. ಉಡುಪಿಯಲ್ಲಿ ಮೇ 5ರಂದು ತಾಲೂಕು ಮಟ್ಟದಲ್ಲಿ ತರಬೇತಿ ನೀಡಿ ಮೇ 7ರಿಂದ ಸಮೀಕ್ಷೆ ಆರಂಭಿಸಿದ್ದು, ಎರಡೂ ಜಿಲ್ಲೆಗಳಲ್ಲಿ ಈಗ ಸಮೀಕ್ಷೆ ನಡೆಯುತ್ತಿದೆ.

ದ.ಕ. ಜಿಲ್ಲೆಯ ಕೆಲವು ತಾಲೂಕು ಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಪಟ್ಟಿ ಮಾಡಿ, ಮೇ 7ರಿಂದ 10ರ ತನಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳು ವಂತೆ ಸೂಚಿಸಿದ್ದರು. ಶಿಕ್ಷಕರ ಮೊಬೈಲ್‌ ಗಳಿಗೆ ಮೇ 6ರಂದು ಸಂಜೆ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ಸಂದೇಶ ತಲುಪಿತ್ತು. ಕ್ಲಸ್ಟರ್‌ ಮಟ್ಟದ ಮೇಲ್ವಿಚಾರಕರು, ನೋಡಲ್‌ ಅಧಿಕಾರಿಗಳಿಗೆ ಶಿಕ್ಷಕರ ಪಟ್ಟಿಯನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕಳುಹಿಸಿ ಕೊಡ ಲಾಗಿತ್ತು. ಪಟ್ಟಿಯಲ್ಲಿರುವ ಶಿಕ್ಷಕರಿಗೆ ವಿಷಯವೇ ಗೊತ್ತಿರಲಿಲ್ಲ. ಕೆಲವು ಬಿಎಲ್‌ಒಗಳಿಗೂ ಮಾಹಿತಿ ಇರಲಿಲ್ಲ. ತರಬೇತಿ ನೀಡದೆ ಸಮೀಕ್ಷೆ ನಡೆಸುವುದಕ್ಕೆ ಬಿಎಲ್‌ಒ, ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿ ದ್ದರು. ಕೆಲವು ಬಿಎಲ್‌ಒಗಳು ಕರ್ತ ವ್ಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದರು. ಈಗಲೂ ಕೆಲವು ಕಡೆಗಳಲ್ಲಿ ನಿವೃತ್ತರನ್ನು ಕರ್ತವ್ಯಕ್ಕೆ ನಿಯೋಜಿಸಿರುವುದು ಗೊಂದಲ ಕ್ಕೀಡು ಮಾಡಿದೆ. ಅವರ ಸ್ಥಾನಕ್ಕೆ ಬೇರೊಬ್ಬ ಶಿಕ್ಷಕರನ್ನು ನೇಮಿಸಿಕೊಂಡು ಸಮಸ್ಯೆ ನಿವಾರಿಸುವ ಪ್ರಯತ್ನ ನಡೆಯುತ್ತಿದೆ.

ಬಿಎಲ್‌ಒಗಳ ಸಹಾಯಕರಾಗಿ ಭಾಗವಹಿಸುವ ಶಿಕ್ಷಕರಿಗೆ ಮೇ 5ರಂದು ತಾಲೂಕು ಮಟ್ಟದಲ್ಲಿ ತರಬೇತಿ ಕೊಡಲಾಗಿದೆ. ಮೇ 7ರಿಂದ ಜಿಲ್ಲೆಯ 1,000 ಮಂದಿ ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಂಡು ಸಮೀಕ್ಷೆ ಕಾರ್ಯದಲ್ಲಿ ನಿರತರಾಗಿದ್ದಾರೆ.
– ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ

ಜಿಲ್ಲೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸಮೀಕ್ಷೆ ನಡೆಯುತ್ತಿದೆ. ಆರೋಗ್ಯ ಇಲಾಖೆ ಜತೆ ಶಿಕ್ಷಕರು ನೆರವು ನೀಡುತ್ತಿದ್ದಾರೆ.ಆರಂಭದಲ್ಲಿ ಕೆಲ ಗೊಂದಲಗಳು ಇದ್ದವು. ಅವು ಈಗ ನಿವಾರಣೆಗೊಂಡು ಸಮೀಕ್ಷೆ ಯಶಸ್ವಿಯಾಗಿ ನಡೆಯುತ್ತಿದೆ.
– ಮಲ್ಲೇಸ್ವಾಮಿ,
ಡಿಡಿಪಿಐ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next