Advertisement
ಕೋವಿಡ್ ಸಂಕಷ್ಟದ ಕಾಲದಲ್ಲೇ ಶಿಕ್ಷಕರ ದಿನಾಚರಣೆ ಎದುರಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಈ ರೀತಿಯ ಸವಾಲನ್ನು ಶಿಕ್ಷಣ ವಲಯ ಎಂದೂ ಎದುರಿಸಿರಲಿಲ್ಲ. ಖಾಸಗಿ ಶಾಲೆಗಳು, ಸರಕಾರಿ ಶಾಲೆಗಳು, ಕಾಲೇಜುಗಳು… ಒಟ್ಟಾರೆ ಯಾಗಿ ಶೈಕ್ಷಣಿಕ ರಂಗದ ಪ್ರತಿಯೊಂದು ಹಂತಕ್ಕೂ ಸವಾಲೊಡ್ಡಿ ಬಿಟ್ಟಿದೆ ಪುಟ್ಟ ವೈರಸ್.
Related Articles
Advertisement
ಶಿಕ್ಷಣವನ್ನು ಆನ್‌ಲೈನ್ ಮಾಡುವ ವಿಚಾರದಲ್ಲಿ ಈಗಲೂ ಹಲವಾರು ಅಡ್ಡಿಗಳಿವೆ. ನೆಟ್‌ವರ್ಕ್ ಸಮಸ್ಯೆ ಒಂದೆಡೆಯಾ ದರೆ, ರಾಜ್ಯದ ವಿದ್ಯಾರ್ಥಿ ಕುಟುಂಬಗಳ ಬಳಿ ಅಗತ್ಯ ಫೋನ್‌ಗಳು, ಟ್ಯಾಬ್‌ಗಳ ಕೊರತೆ ಕಾಡುತ್ತಿದೆ. ಈ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕಿದೆ.
ಬದಲಾವಣೆಯೆನ್ನುವುದು ಜಗದ ನಿಯಮ ಎನ್ನುವ ನಾಣ್ನುಡಿಯೇ ಇದೆ ಯಾದರೂ, ಹಠಾತ್ತನೆ ಈ ಪ್ರಮಾಣದ ಬದಲಾವಣೆಗೆ ಒಗ್ಗಿಕೊಳ್ಳುವುದು ಸುಲಭದ ಕೆಲಸವಲ್ಲ. ಯಾವುದೇ ಬೃಹತ್ ಬದಲಾ ವಣೆಯಿರಲಿ, ಆರಂಭದಲ್ಲಿ ಅದು ಬಹಳ ಅಸೌಖ್ಯವನ್ನುಂಟು ಮಾಡುತ್ತದೆ ಎನ್ನುವುದು ಸತ್ಯ.
ಈ ಕಾರಣಕ್ಕಾಗಿಯೇ, ಇಂದು ಸಮಾಜ ಮತ್ತು ಸರಕಾರ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ ಅಗತ್ಯವಿದೆ. ಅವರ ಸಮಸ್ಯೆಗ ಳಿಗೆ ತ್ವರಿತವಾಗಿ ಸ್ಪಂದಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಮರುವೇಗ ನೀಡುವ ಈ ಯೋಧರಿಗೆ ಅಸೌಖ್ಯ, ತೊಂದರೆ ಯಾಗದಂತೆ ನೋಡಿಕೊಳ್ಳಬೇಕಿದೆ. ಪಾಠಕ್ಕಿಂತ ಪಠ್ಯೇತರ ಹೊರೆಯೂ ಹೆಚ್ಚಾಗುತ್ತಿದೆ ಎನ್ನುವ ದೂರುಗಳೂ ಕೇಳಿಬರು ತ್ತಿದ್ದು, ಶಿಕ್ಷಕರ ಮೇಲಿಂದ ಈ ಭಾರವನ್ನು ತಗ್ಗಿಸಲು ಸರಕಾರ ಮುಂದಾಗಬೇಕು.
ಕೊರೊನಾ ವಾರಿಯರ್‌ಗಳ ಬಗ್ಗೆ ಚರ್ಚೆ ನಡೆಯುವಾಗಲೆಲ್ಲ ಶಿಕ್ಷಕರ ಹೆಸರು ಕೊನೆಗೆ ಬರುತ್ತಿರುವುದು ಬೇಸರದ ಸಂಗತಿ. ಎಲ್ಲ ಸಂಕಷ್ಟಗಳ ನಡುವೆಯೂ ನವಪೀಳಿಗೆಗೆ ಭದ್ರ ಜ್ಞಾನ ಬುನಾದಿ ಹಾಕಲು ಕಟಿಬದ್ಧರಾಗಿರುವ ಈ ವರ್ಗಕ್ಕೆ ಇಡೀ ಸಮಾಜ ಋಣಿಯಾಗಬೇಕು. ಈಗಿನ ಸಂಕಷ್ಟಗಳೆಲ್ಲ ಆದಷ್ಟು ಬೇಗನೇ ಬಗೆಹರಿಯುವಂತಾಗಲಿ ಎಂದು ಆಶಿಸೋಣ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.