ಆಳಂದ: ವಿದ್ಯಾರ್ಥಿಗಳ ಉನ್ನತ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಅನ್ಯೂನ್ಯತೆ ಬಾಂಧವ್ಯವನ್ನು ಮುನ್ನೆಡೆಸಿಕೊಂಡು ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನೂಡಿ ಬರೆಯಬೇಕು ಎಂದು ಕರವೇ ಜಿಲ್ಲಾ ಸಂಚಾಲಕ ಮಹಾಂತೇಶ ಸಣ್ಣಮನಿ ಹೇಳಿದರು.
ತಾಲೂಕಿನ ಮದಗುಣಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ ನಡೆದ ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಮನೋಬಲ, ಅವರಲ್ಲಿನ ಪ್ರತಿಭೆ ಹೊರತರುವ ಜವಾಬ್ದಾರಿಯುತ ಕೆಲಸವನ್ನು ಮಾಡಲು ಮುಂದಾದಾಗ ಮಾತ್ರ ಗ್ರಾಮೀಣ ಪ್ರತಿಭೆಗಳು ಹೊರಬರಲು ಸಾಧ್ಯವಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕ ಯಶ್ವಂತ ಬಸ್ತೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಸಿಆರ್‌ಸಿ ಅಶೋಕ ಚವ್ಹಾಣ ಮಾತನಾಡಿದರು.
ಉಪನ್ಯಾಸಕ ಸುಧಾಕರ ಗಾಡೆಕರ್, ಶಿಕ್ಷಕರಾದ ಬಾಪುಗೌಡ ಬಿರಾದಾರ, ಕಿರಣ ಸಿಂಗೆ, ವಿರೂಪಾಕ್ಷಯ್ಯ ಹಿರೇಮಠ, ಸಂಗೀತಾ ಹಾದಿಮನಿ, ಅರವಿಂದ ರುದ್ರವಾಡಿ ಇದ್ದರು.