Advertisement
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, “ಮುಂದಿನ ವರ್ಷದಿಂದ ಹೋಬಳಿಗೊಂದು ಸರಕಾರಿ ಪಬ್ಲಿಕ್ ಶಾಲೆ ತೆರೆದು ಖಾಸಗಿಗೆ ಸಡ್ಡು ಹೊಡೆಯುವಂತೆ ಶಿಕ್ಷಣ ನೀಡಲಾಗುವುದು. ಶಿಕ್ಷಕರಿಗೆ ವೇತನವಾಗದೇ ಡಿಡಿಪಿಐ, ಬಿಇಒಗೆ ವೇತನವಾಗಬಾರದು ಎಂದು ಆದೇಶ ನೀಡಲಾಗಿದೆ. ಅಲ್ಲದೆ, ಶಿಕ್ಷಕರಿಗೆ ನಿವೃತ್ತಿಗೆ ಮುನ್ನ 3 ಬಡ್ತಿ ಕಡ್ಡಾಯ ಮಾಡಲಾಗಿದೆ’ ಎಂದರು. “ಶಿಕ್ಷಣ ಕಿರಣ’ ಮೂಲಕ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿದ್ದು ಇದನ್ನೇ ಎಸ್ಸೆಸ್ಸೆಲ್ಸಿ ಬೋರ್ಡಿಗೂ ನೀಡಲಾಗಿದೆ. ಮುಂದಿನ ವರ್ಷ ಕೆಎಸ್‌ಆರ್‌ಟಿಸಿಗೂ ನೀಡಲಾಗುತ್ತಿದ್ದು ಮುಖ್ಯ ಶಿಕ್ಷಕರು ನಮೂದಿಸಿದ ವಿದ್ಯಾರ್ಥಿಗೆ ಶಾಲೆಗೇ ಬಸ್ ಪಾಸ್ ಬರಲಿದೆ. ಕೆಎಸ್‌ಆರ್‌ಟಿಸಿ ಕೌಂಟರ್‌ನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದರು. Advertisement
ಶಿಕ್ಷಕರ ಮಕ್ಕಳಿಗೆ ಸರಕಾರಿ ಶಾಲೆ ಕಡ್ಡಾಯವಿಲ್ಲ
09:30 AM Oct 11, 2017 | |
Advertisement
Udayavani is now on Telegram. Click here to join our channel and stay updated with the latest news.