Advertisement

ಶಿಕ್ಷಕರ ವರ್ಗಾವಣೆ: ನ.17ರಿಂದ ಪ್ರಕ್ರಿಯೆ ಆರಂಭ

12:16 AM Nov 13, 2020 | mahesh |

ಬೆಂಗಳೂರು: ಬಹುನಿರೀಕ್ಷಿತ ಶಿಕ್ಷಕರ ವರ್ಗಾವಣೆಗೆ ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿದ್ದು, ನ. 17ರಿಂದ ಈ ಸಂಬಂಧದ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯಲಿದೆ.

Advertisement

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು, ತತ್ಸಮಾನ ವೃಂದ ಮತ್ತು ಪ್ರೌಢಶಾಲೆ ಮುಖ್ಯ ಶಿಕ್ಷಕರು/ ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳ ಪ್ರಕ್ರಿಯೆ ಈ ಬಾರಿ ಆನ್‌ಲೈನ್‌ ಮೂಲಕವೇ ನಡೆಯಲಿದ್ದು, “ಶಿಕ್ಷಕರ ಮಿತ್ರ’ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಈ ಸಲ ವಲಯ ವರ್ಗಾವಣೆ ಮತ್ತು ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.

ವರ್ಗಾವಣೆ ಸಂಬಂಧ ಈ ಅಧಿಸೂಚನೆ ಹೊರಡಿಸಿದ ದಿನದವರೆಗಿನ ಖಾಲಿ ಹುದ್ದೆಗಳನ್ನು ಮಾತ್ರ ವರ್ಗಾವಣೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು. ಬಳಿಕ ಉದ್ಭವಿಸುವ ಖಾಲಿ ಹುದ್ದೆಗಳನ್ನು ಗುರುತಿಸಲು ತಂತ್ರಾಂಶದಲ್ಲಿ ಅವಕಾಶ ಇರುವುದಿಲ್ಲ. ಜಿಲ್ಲೆಯ ಒಳಗಿನ ಕೋರಿಕೆ ವರ್ಗಾವಣೆ ಮಿತಿ ಶೇ. 7, ವಿಭಾಗದ ಒಳಗೆ ಮತ್ತು ಹೊರಗಿನ ಕೋರಿಕೆ ವರ್ಗಾವಣೆ ಮಿತಿಯನ್ನು ತಲಾ ಶೇ. 2ಕ್ಕೆ ಸೀಮಿತಗೊಳಿಸಲಾಗಿದೆ.

“ಕಳೆದ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಶಿಕ್ಷೆಗೆ ಒಳಗಾದ ಶಿಕ್ಷಕರಿಗೆ ಈ ಬಾರಿ ಮೊದಲ ಆದ್ಯತೆ ವರ್ಗಾವಣೆ ಇರಲಿದೆ. ನ. 17ರಿಂದ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಶಿಕ್ಷಕ ಮಿತ್ರ ಆ್ಯಪ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ನಿರ್ವಹಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ
ನ. 17: ವರ್ಗಾವಣೆ ಅಧಿಸೂಚನೆ ಹೊರಡಿಸಿದ ದಿನಾಂಕದಂದು ಐದು ವರ್ಷ ಪೂರ್ಣಗೊಳಿಸಿದ ಶಿಕ್ಷಕರ ಪಟ್ಟಿ ಪ್ರಕಟ
ನ. 18ರಿಂದ 30: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ
ಡಿ. 1ರಿಂದ 11: ಅರ್ಜಿಗಳನ್ನು ಅಂತಿಮಗೊಳಿಸುವುದು
ಡಿ. 15: ಅರ್ಜಿ ಸಲ್ಲಿಸಿದವರ ಕರಡು ಆದ್ಯತಾ ಪಟ್ಟಿ ಪ್ರಕಟ
ಡಿ. 16ರಿಂದ 23: ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಡಿ. 24ರಿಂದ 29: ಆಕ್ಷೇಪಣೆಗಳ ಪರಿಶೀಲನೆ ಮತ್ತು ಓಪನ್‌ ಹಿಯರಿಂಗ್‌
2021ರ ಜ. 4: ಅಂತಿಮ ವರ್ಗಾವಣೆ ಪಟ್ಟಿ ಪ್ರಕಟ
ಜ. 11: ಪ್ರೌಢಶಾಲೆ ಮುಖ್ಯ ಶಿಕ್ಷಕರ ವೃಂದದ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ
ಜ. 16: ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಳ ನಿಯುಕ್ತಿ ಪ್ರಕ್ರಿಯೆ
ಜ. 27: ಪ್ರೌಢಶಾಲಾ ಶಿಕ್ಷಕರ ಸ್ಥಳ ನಿಯುಕ್ತಿ

Advertisement

ವಿಭಾಗೀಯ ವರ್ಗಾವಣೆ
ಜ. 13: ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜ. 19ರಿಂದ 23: ಸ್ಥಳ ನಿಯುಕ್ತಿ
ಜ. 25: ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜ. 27: ಸ್ಥಳ ನಿಯುಕ್ತಿ

ಅಂತರ ವಿಭಾಗೀಯ ವರ್ಗಾವಣೆ
ಫೆ. 3: ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಫೆ. 9ರಿಂದ 19: ಸ್ಥಳ ನಿಯುಕ್ತಿ
ಫೆ. 20: ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಫೆ. 22: ಸ್ಥಳ ನಿಯುಕ್ತಿ

ಸಾಮಾನ್ಯ ಕೋರಿಕೆ
ನ. 18ರಿಂದ 30: ವರ್ಗಾವಣೆ ಬಯಸಿ ಅರ್ಜಿ ಸಲ್ಲಿಕೆಗೆ ಅವಕಾಶ
ಡಿ. 1ರಿಂದ 11: ಅರ್ಜಿಗಳ ಪರಿಶೀಲನೆ
ಡಿ. 15: ಕರಡು/ ಆದ್ಯತಾ ಪಟ್ಟಿ ಪ್ರಕಟ
ಡಿ. 16ರಿಂದ 23: ಆದ್ಯತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ
ಡಿ. 24ರಿಂದ 29: ಆಕ್ಷೇಪಣೆಗಳ ಪರಿಶೀಲನೆ
ಡಿ. 31: ಅಂತಿಮ ಅರ್ಹತಾ ಪಟ್ಟಿ ಪ್ರಕಟ

ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆ (ಪ್ರಾಥಮಿಕ ಶಾಲೆ)
2021ರ ಜ. 1: ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜ. 4ರಿಂದ 11: ಸ್ಥಳ ನಿಯುಕ್ತಿ
ಜ. 12: ಪರಸ್ಪರ ವರ್ಗಾವಣೆಗೆ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜ. 13: ಸ್ಥಳ ನಿಯುಕ್ತಿ

ವಿಭಾಗೀಯ ವರ್ಗಾವಣೆ
ಜ. 25: ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜ. 29ರಿಂದ ಫೆ. 2: ಸ್ಥಳ ನಿಯುಕ್ತಿ
ಫೆ. 4: ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಫೆ. 6: ಸ್ಥಳ ನಿಯುಕ್ತಿ

ಕಡ್ಡಾಯ/ ಹೆಚ್ಚುವರಿ ವರ್ಗಾವಣೆ
ನ. 17: ಕಡ್ಡಾಯ/ ಹೆಚ್ಚುವರಿಯಾಗಿ ತಾಲೂಕು ಅಥವಾ ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಶಿಕ್ಷಕರ ಪಟ್ಟಿ ಪ್ರಕಟ
ನ. 20ರಿಂದ 23: ಆಕ್ಷೇಪಣೆಗೆ ಅವಕಾಶ
ನ. 24ರಿಂದ 30: ಅರ್ಜಿ ಸಲ್ಲಿಕೆ
ಡಿ. 14: ಕೌನ್ಸೆಲಿಂಗ್‌ ಅರ್ಹತಾ ಪಟ್ಟಿ ಪ್ರಕಟ
ಡಿ. 16-17: ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್‌ ಪ್ರಕ್ರಿಯೆ
ಡಿ. 18-19: ಪ್ರೌಢಶಾಲಾ ಶಿಕ್ಷಕರ ಕೌನ್ಸೆಲಿಂಗ್‌ ಪ್ರಕ್ರಿಯೆ

ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆ (ಪ್ರೌಢ ಶಾಲೆ)
2021ರ ಜ. 1: ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜ. 18ರಿಂದ 21: ಸ್ಥಳ ನಿಯುಕ್ತಿ
ಜ. 22: ಪರಸ್ಪರ ವರ್ಗಾವಣೆಗೆ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜ. 25: ಸ್ಥಳ ನಿಯುಕ್ತಿ

ಅಂತರ ವಿಭಾಗೀಯ ವರ್ಗಾವಣೆ
ಜ. 25: ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜ. 27ರಿಂದ ಫೆ. 8: ಸ್ಥಳ ನಿಯುಕ್ತಿ
ಫೆ. 9: ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಫೆ. 10: ಸ್ಥಳ ನಿಯುಕ್ತಿ

ಸಹಾಯವಾಣಿ
ವರ್ಗಾವಣೆಗೆ ಸಂಬಂಧಿಸಿ ಶಿಕ್ಷಕರ ಅನುಕೂಲಕ್ಕಾಗಿ ಉಪನಿರ್ದೇಶಕರ ಕಚೇರಿ ಹಾಗೂ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ವರ್ಗಾವಣೆ ಕೋಶ ರಚಿಸಲಾಗಿದೆ. ಈ ಕೋಶದ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆ ಅಧಿಕಾರಿಗಳು ವರ್ಗಾವಣೆ ಸಂಬಂಧಿತ ವಿಚಾರಗಳಿಗೆ ಸಹಾಯವಾಣಿ ಸ್ಥಾಪಿಸಲಿದ್ದಾರೆ. ಅಲ್ಲಿ ಕೌನ್ಸೆಲಿಂಗ್‌ ದಿನಾಂಕಗಳು ಬದಲಾವಣೆಗೊಳಪಟ್ಟರೆ, ವರ್ಗಾವಣೆ ಕೋಶದಲ್ಲಿಯೇ ವೆಬ್‌ಸೈಟ್‌ ಮೂಲಕ ಮಾಹಿತಿ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next