Advertisement

ಶಿಕ್ಷಕರ ವರ್ಗಾವಣೆ ಸಮಸ್ಯೆ-ಪ್ರತಿಭಟನೆ

03:50 PM Nov 30, 2021 | Shwetha M |

ರಾಯಚೂರು: ಶಿಕ್ಷಕ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳಿದ್ದು, ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಡಿಡಿಪಿಐ ಕಚೇರಿ ಎದುರು ದಿಢೀರ್‌ ಪ್ರತಿಭಟನೆ ನಡೆಸಿದ ಅವರು, ನ.29ರಿಂದ ಜಿಲ್ಲೆಯೊಳಗಿನ ವರ್ಗಾವಣೆ ಶುರುವಾಗಿದ್ದು, ಶೇ.25ಕ್ಕಿಂತ ಹೆಚ್ಚು ಖಾಲಿ ಇರುವ ತಾಲೂಕುಗಳಿಂದ ವರ್ಗಾವಣೆ ಮಾಡುವುದಿಲ್ಲ ಎಂದು ಡಿಡಿಪಿಐ ಮಾಹಿತಿ ನೀಡುತ್ತಿದ್ದಂತೆ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಚಂದ್ರಶೇಖರ್‌ ರೆಡ್ಡಿ ಮಾತನಾಡಿ, ಬಹಳ ದಿನಗಳ ಬಳಿಕ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ನಡೆಯುತ್ತಿದೆ. ತಾಲೂಕಿನಲ್ಲಿ ಶೇ.25ಕ್ಕಿಂತ ಕಡಿಮೆ ಇದ್ದರೆ ಮಾತ್ರ ಕೌನ್ಸೆಲಿಂಗ್‌ ನಡೆಯುತ್ತದೆ. ಇಲ್ಲವಾದರೆ ಇಲ್ಲ ಎಂಬ ನೀತಿ ಸರಿಯಲ್ಲ. ಈ ಸಮಸ್ಯೆ ಬಗ್ಗೆ ಅನೇಕ ವರ್ಷಗಳಿಂದ ಸರ್ಕಾರಕ್ಕೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಾಕಷ್ಟು ಶಿಕ್ಷಕರು ಅನೇಕ ವರ್ಷಗಳಿಂದ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ವರ್ಗಾವಣೆಗಾಗಿ ಕಾದು ಕುಳಿತಿದ್ದಾರೆ. ಕೌನ್ಸೆಲಿಂಗ್‌ ಕರೆದಿದ್ದು, ಈಗಲಾದರೂ ವರ್ಗಾವಣೆ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವವರೆಗೂ ಕೌನ್ಸೆಲಿಂಗ್‌ ನಡೆಸಕೂಡದು ಎಂದು ಪಟ್ಟು ಹಿಡಿದರು.

ಇದರಿಂದ ಕೌನ್ಸೆಲಿಂಗ್‌ ಪ್ರಕ್ರಿಯೆ ಮತ್ತೂಮ್ಮೆ ಮುಂದೂಡಲಾಯಿತು. ಈ ವೇಳೆ ಹನುಮಂತರೆಡ್ಡಿ, ರಾಘವೇಂದ್ರ, ಗಂಗಪ್ಪ, ಪಕ್ಷಪ್ಪ ಗೌಡ, ಬಿ.ಗಂಗಾಧರ್‌, ಕೃಷ್ಣ ಜಿ, ಅಮರಯ್ಯ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next