Advertisement

ಬೀದರ್ : ಕೇಂದ್ರ ಸಚಿವರೊಂದಿಗೆ ಅನುಚಿತವಾಗಿ ವರ್ತಿಸಿದ ಶಿಕ್ಷಕ ಅಮಾನತ್ತು

09:28 PM Jun 21, 2022 | Team Udayavani |

ಬೀದರ್ : ರಸಗೊಬ್ಬರ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರ ಜತೆ ಮೊಬೈಲ್‌ ನಲ್ಲಿ ಅನುಚಿತವಾಗಿ ವರ್ತಿಸಿದ ಆರೋಪ ಹಿನ್ನಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತ್ತುಗೊಳಿಸಿ ಡಿಡಿಪಿಐ ಗಣಪತಿ ಬಾರಾಟಕೆ ಆದೇಶ ಹೊರಡಿಸಿದ್ದಾರೆ.

Advertisement

ಔರಾದ ತಾಲೂಕಿನ ಜೀರ್ಗಾ(ಕೆ) ಸರ್ಕಾರಿ ಶಾಲಾ ಶಿಕ್ಷಕ ಕುಶಾಲ ಪಾಟೀಲ ಅಮಾನತ್ತುಗೊಂಡ ಶಿಕ್ಷಕರ. ಜೂ. 10 ರಂದು ಪಾಟೀಲ ಅವರು ಸ್ವಗ್ರಾಮ ಹೆಡಗಾಪುರದಲ್ಲಿ ರಸಗೊಬ್ಬರ ಕೊರತೆ ಸಂಬಂಧ ಕೇಂದ್ರ ಸಚಿವ ಖೂಬಾ ಅವರಿಗೆ ಮೊಬೈಲ್ ಕರೆ ಮಾಡಿದ್ದರು. ಈ ವೇಳೆ ಸಚಿವರು ಮತ್ತು ಶಿಕ್ಷಕನ ನಡುವೆ ನಡೆದ ಏಕ ವಚನದಲ್ಲಿ ಮಾತಿನ ವಾಗ್ವಾದದ‌ ಆಡಿಯೋ ವೈರಲ್ ಆಗಿತ್ತು.

ಘಟನೆಗೆ ಸಂಬಂಧ ಔರಾದ ಬಿಇಒ ಎಚ್.‌ಎಸ್. ನಗನೂರು ಅವರು ನೀಡಿರುವ ವರದಿ ಅನ್ವಯ ಶಿಕ್ಷಕ ಕುಶಾಲ ಅವರನ್ನು ಅಮಾನತು ಗೊಳಿಸಲಾಗಿದೆ. ಕೇಂದ್ರ ಸಚಿವರೊಂದಿಗೆ ಶಿಕ್ಷಕ ಪಾಟೀಲ, ಸರ್ಕಾರಿ ನೌಕರರಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಹಾಗೂ ಸಚಿವರೊಂದಿಗೆ ಮಾತನಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ್ದಕ್ಕೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ‌ ಎಂದು ಡಿಡಿಪಿಐ ‘ಉದಯವಾಣಿ’ಗೆ ತಿಳಿಸಿದ್ದರೆ.

ಇದನ್ನೂ ಓದಿ : ಒಡಿಶಾದಲ್ಲಿ ನಕ್ಸಲರ ದಾಳಿ: ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮ

Advertisement

Udayavani is now on Telegram. Click here to join our channel and stay updated with the latest news.

Next