Advertisement

Gangavathi; ಮಕ್ಕಳು ಆಸ್ವಸ್ಥ ಪ್ರಕರಣ ಮುಖ್ಯಶಿಕ್ಷಕಿ, ಸಹ ಶಿಕ್ಷಕ ಅಮಾನತು

08:18 PM Apr 04, 2024 | Team Udayavani |

ಗಂಗಾವತಿ: ತಾಲೂಕಿನ ಸಂಗಾಪೂರ ಗ್ರಾಮದ ಶ್ರೀರಂಗದೇವರಾಯಲು ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಶಿಕ್ಷಕಿ, ಸಹ ಶಿಕ್ಷಕನನ್ನ ಅಮಾನತು ಮಾಡಲಾಗಿದೆ.

Advertisement

ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಣಿಸಿದ್ದು ಘಟನೆಗೆ ಸಂಬಂಧಪಟ್ಟಂತೆ ಮುಖ್ಯಶಿಕ್ಷಕಿ ಪುಷ್ಟ ಎನ್. ಹಾಗೂ ಸಹಶಿಕ್ಷಕ ಶರಣ ಬಸವರಾಜ ಇವರನ್ನು ಬಿಇಒ ಅವರ ವರದಿ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಸ್.ಎಸ್.ಬಿರದಾರ್ ಆದೇಶ ಹೊರಡಿಸಿ ಪ್ರಕರಣ ತನಿಖೆಯ ಸಂದರ್ಭದಲ್ಲಿ ಕೇಂದ್ರ ಸ್ಥಾನ ಬಿಟ್ಟು ಪರವಾನಿಗೆ ಇಲ್ಲದೆ ಹೋಗದಂತೆ ಸೂಚನೆ ನೀಡಿದ್ದಾರೆ.

ಏ.02 ರಂದು ಶಾಲೆಯಲ್ಲಿ ಬಿಸಿಯೂಟ ಸೇವಿಸಿ 30 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಸ್ಥಳಕ್ಕೆ ಜಿ.ಪಂ.ಸಿಇಒ, ಆರೋಗ್ಯ ಇಲಾಖೆಯ ಡಿಎಚ್‌ಓ, ತಹಸೀಲ್ದಾರ್, ಇಒ ಹಾಗೂ ಹಿರಿಯ ಪ್ರಧಾನ ನ್ಯಾಯಾಧೀಶರು ತೆರಳು ಮಕ್ಕಳ ಆರೋಗ್ಯ ವಿಚಾರಿಸಿ ಘಟನೆಗೆ ಕಾರಣ ಕುರಿತು ಪರಿಶೀಲನೆ ನಡೆಸಿದ್ದರು. ಅಡುಗೆ ಬಳಸಿದ ನೀರು, ಕುಡಿಯುವ ನೀರು ಸೇರಿ ಬಿಸಿಯೂಟ ತಯಾರಿಸುವ ಕೊಠಡಿಗಳ ಪರಿಶೀಲನೆ ಸಂದರ್ಭದಲ್ಲಿ ನಿರ್ಲಕ್ಷ್ಯ ಕಂಡು ಬಂದಿದ್ದರಿಂದ ಮುಖ್ಯಶಿಕ್ಷಕಿ ಹಾಗೂ ಸಹಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ನ್ಯಾಯಾಧೀಶರ ಭೇಟಿ
ಸಂಗಾಪುರದಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಲು ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ್ ಗಾಣಿಗೇರ್ ಬುಧವಾರ ಸಂಗಾಪುರದ ಶ್ರೀರಂಗದೇವರಾಯಲು ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಅಡುಗೆ ಮನೆ ಅಡುಗೆ ಮಾಡಲು ಬಳಸುವ ನೀರಿನ ತೊಟ್ಟಿ ಶೌಚಾಲಯ ಪರಿಶೀಲಿಸಿ ಕೂಡಲೇ ಸ್ವಚ್ಛಗೊಳಿಸಿ ಮಕ್ಕಳ ಆರೋಗ್ಯ ಕಾಪಾಡುವಂತೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next