Advertisement

BJP ಅಭ್ಯರ್ಥಿಯನ್ನು ಆಲಿಂಗಿಸಿದ ಮಹಿಳಾ ಎಎಸ್‌ಐ ಅಮಾನತು

12:58 AM Apr 23, 2024 | Team Udayavani |

ಹೈದರಾಬಾದ್‌: ಕರ್ತವ್ಯದ ವೇಳೆ ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾರನ್ನು ಆಲಿಂಗನ ಮಾಡಿದ ಮಹಿಳಾ ಎಎಸ್‌ಐರನ್ನು ಅಮಾನತುಗೊಳಿಸಿದ್ದಾರೆ.

Advertisement

ಪ್ರಚಾರದ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಎಎಸ್‌ಐ ಉಮಾದೇವಿ ಅವರು ಮಾಧವಿ ಅವರನ್ನು ಆಲಿಂ ಗಿಸಿ ಬಳಿಕ ಹಸ್ತಲಾಘವ ಮಾಡಿ ಶುಭ ಕೋರಿದ್ದರು. ವೀಡಿಯೋ ವೈರಲ್‌ ಆದ ಬೆನ್ನಲ್ಲೇ, ಹಿರಿಯ ಅಧಿಕಾ ರಿಗಳು ಉಮಾ ಅವರನ್ನು ಅಮಾನತುಗೊಳಿಸಿದ್ದಾರೆ.

ಎಫ್ಐಆರ್‌ ದಾಖಲು: ಇದೇ ವೇಳೆ, ರಾಮ ನವಮಿ ಮೆರವಣಿಗೆ ವೇಳೆ ಮಾಧವಿ ಅವರು ಮಸೀದಿಯತ್ತ ಬಾಣ ಬಿಡುವ ರೀತಿ ಸನ್ನೆ ಮಾಡಿ ದ್ದಾರೆಂಬ ಆರೋಪದ ಮೇರೆಗೆ ಪೊಲೀಸರು ಮಾಧವಿ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next