Advertisement

ಗೂಂಡಾ ಸರ್ಕಾರಕ್ಕೆ ಪಾಠ ಕಲಿಸಿ

05:39 PM Sep 22, 2018 | Team Udayavani |

ಯಾದಗಿರಿ: ಗೂಂಡಾ ಸರ್ಕಾರಕ್ಕೆ ಪಾಠ ಕಲಿಸಬೇಕಾಗುತ್ತದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿ ಮೂಲಕ ಸುಭಾಷ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಚ್ಚಿ ಸಿಎಂ ಕುಮಾರಸ್ವಾಮಿ ಹೇಳಿಕೆ, ಬಿಎಸ್‌ವೈ ಮನೆ ಎದುರು ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ ಖಂಡಿಸಿ ಅವರು ಮಾತನಾಡಿದರು.

Advertisement

ಮುಖ್ಯಮಂತ್ರಿ ರಾಜ್ಯದ ಜನರು ದಂಗೆ ಏಳಿ ಎಂದು ಪ್ರಚೋದನೆ ನೀಡಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಮನೆ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ ಮಾಡಿದ್ದು, ಇದಕ್ಕೆ ಮುಖ್ಯಮಂತ್ರಿ
ಅವರ ಪ್ರಚೋದನೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸರ್ಕಾರವನ್ನು ಬಿಜೆಪಿಯವರ ಬೀಳಿಸಲು ಪ್ರಯತ್ನಿಸುತ್ತಿಲ್ಲ. ಅವರ ಶಾಸಕರ ಮೇಲೆಯೇ ಅವರಿಗೆ ನಂಬಿಕೆ ಇಲ್ಲ, ಹಾಗಾಗಿ ಬಿಜೆಪಿ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಇಂತಹ ಕೀಳು ಮಾತುಗಳನ್ನಾಡಬಾರದು ಎಂದು ದೂರಿದರು.

ಇದಕ್ಕೂ ಮುನ್ನ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಕಾನೂನು ಸುವ್ಯವಸ್ಥೆ ಬಿಗಡಾಸಲು
ಕಾರಣರಾದ ಮುಖ್ಯಮಂತ್ರಿ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ಜನತೆಯಲ್ಲಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
 
ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ರಾಜ್ಯಕಾರ್ಯಕಾರಣಿ ಸದಸ್ಯ ಡಾ| ಶರಣಭೂಪಾಲರಡ್ಡಿ ನಾಯ್ಕಲ್‌, ನಗರಸಭೆ
ಸದಸ್ಯೆ ಲಲಿತಾ ಅನಪುರ, ಹಣಮಂತ ಇಟಗಿ, ಅಂಬಯ್ಯ ಶಾಬಾದಿ, ಸುರೇಶ ಅಂಬಿಗೇರ, ವಿಲಾಸ ಪಾಟೀಲ, ಮಾರುತಿ ಕಲಾಲ, ಹಸದ್‌ಬಿನ್‌ ಚಾಹುಷ್‌, ಎಸ್‌.ಪಿ. ನಾಡೇಕಾರ್‌, ಸ್ವಾಮಿದೇವ ದಾಸನಕೇರಿ, ದೇವಿಂದ್ರನಾಥ ನಾದ, ಶರಣಗೌಡ ಬಾಡಿಯಾಳ, ಸುರೇಶ ಆಕಳ, ಬಸವರಾಜ ಪಾಟೀಲ ಬಿಳಾØರ, ರವಿ ಬಾಪುರೆ, ವೆಂಕಟರಡ್ಡಿ ಅಬ್ಬೆತುಮಕೂರ, ಮಹೇಶ ಕುರಕುಂಬಳ, ದೇವೀಂದ್ರ ಯರಗೋಳ, ಸಿದ್ದು ಪೂಜಾರಿ, ಶಿವು ದೊಡ್ಮನಿ, ಶಿವು ಅಲ್ಲಿಪೂರ, ರಮೇಶ  ದೊಡ್ಮನಿ , ಶರಣಗೌಡ ಕಾಳೆಬೆಳಗುಂದಿ, ಯಲ್ಲಾಲಿಂಗರಡ್ಡಿ ತಳಕ, ನಾಗಪ್ಪ ಗಚ್ಚಿನ್‌, ರವಿ ಮುದ್ನಾಳ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next