Advertisement

ಕುರಾನ್‌ ಓದಲಿ,ಆದರೆ ಮದರಸಾಗಳ ಶಿಕ್ಷಣ ಅಸ್ತಿತ್ವದಲ್ಲಿರಬಾರದು: ಹಿಮಂತ ಬಿಸ್ವಾ

03:00 PM May 23, 2022 | Team Udayavani |

ನವದೆಹಲಿ : ‘ಮದರಸಾ’ ಎಂಬ ಪದವು ಅಸ್ತಿತ್ವದಲ್ಲಿರಬಾರದು, ಎಲ್ಲರಿಗೂ ಶಾಲೆಗಳಲ್ಲಿ ಸಮಾನ ಶಿಕ್ಷಣ ನೀಡಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

Advertisement

ಪಾಂಚಜನ್ಯ ಸಾಪ್ತಾಹಿಕದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಅವರು, ಶಿಕ್ಷಣಕ್ಕಿಂತ ಧಾರ್ಮಿಕ ಪ್ರಚೋದನೆಗೆ ಆದ್ಯತೆ ನೀಡುವ ಮದರಸಾಗಳ ಅಸ್ತಿತ್ವವನ್ನು ನಾನು ಯಾವಾಗಲೂ ಪ್ರಶ್ನಿಸುತ್ತೇನೆ. ಪ್ರತಿ ಮಗುವೂ ವಿಜ್ಞಾನ, ಗಣಿತ ಮತ್ತು ಆಧುನಿಕ ಶಿಕ್ಷಣದ ಇತರ ಶಾಖೆಗಳ ಜ್ಞಾನಕ್ಕೆ ತೆರೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮದರಸಾಗಳಲ್ಲಿನ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾವಂತರಾಗಿದ್ದು, ಅವರು ಕುರಾನ್‌ನ ಪ್ರತಿಯೊಂದು ಪದವನ್ನು ಹೃದಯದಿಂದ ಕಂಠಪಾಠ ಮಾಡಿರುತ್ತಾರೆ ಎಂದು ಮಾಜಿ ಕುಲಪತಿ ಯೊಬ್ಬರ ಹೇಳಿಕೆಗೆ ತೀಕ್ಷ್ಣವಾದ ಪ್ರತ್ಯುತ್ತರ ನೀಡಿ ” ನಮ್ಮ ದೇಶದ ಎಲ್ಲಾ ಮುಸ್ಲಿಮರು ಹಿಂದೂಗಳು,ಭಾರತದಲ್ಲಿ ಯಾರೂ ಮುಸ್ಲಿಮರಾಗಿ ಹುಟ್ಟಿಲ್ಲ ಭಾರತದಲ್ಲಿ ಎಲ್ಲರೂ ಹಿಂದೂಗಳೇ ಆಗಿದ್ದರು. ಆದ್ದರಿಂದ, ಒಂದು ಮುಸ್ಲಿಂ ಮಗು ಅತ್ಯಂತ ಪ್ರತಿಭಾವಂತನಾಗಿದ್ದರೆ, ನಾನು ಅವನ ಹಿಂದೂ ಗತಕಾಲಕ್ಕೆ ಭಾಗಶಃ ಮನ್ನಣೆ ನೀಡುತ್ತೇನೆ ಎಂದರು.

ಮದ್ರಸಾ ಎಂಬ ಪದ ಇರುವವರೆಗೂ, ಮಕ್ಕಳು ವೈದ್ಯರು ಮತ್ತು ಎಂಜಿನಿಯರ್ ಆಗುವ ಬಗ್ಗೆ ಯೋಚಿಸಲು ಸಾಧ್ಯವಾಗುವುದಿಲ್ಲ. ಮದರಸಾಗಳಲ್ಲಿ ಓದಿದರೆ ಡಾಕ್ಟರ್, ಇಂಜಿನಿಯರ್ ಆಗುವುದಿಲ್ಲ ಎಂದು ಮಕ್ಕಳಿಗೆ ಹೇಳಿದರೆ ಅವರೇ ಹೋಗಲು ನಿರಾಕರಿಸುತ್ತಾರೆ ಎಂದರು.

ಇದನ್ನೂ ಓದಿ : ರೇವ್ ಪಾರ್ಟಿಗೆ ಪೊಲೀಸರ ದಾಳಿ; ಡ್ರಗ್ಸ್ ನಶೆ ಹೆಚ್ಚಾಗಿ ಕುಸಿದು ಬಿದ್ದ ಯುವಕ ಸಾವು

Advertisement

” ಮನೆಯಲ್ಲಿ ನಿಮ್ಮ ಮಕ್ಕಳಿಗೆ ಕುರಾನ್ ಕಲಿಸಿ, ಆದರೆ ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಮಕ್ಕಳನ್ನು ಮದರಸಾಗಳಿಗೆ ಸೇರಿಸಬಾರದು ಎಂದು ಹೇಳಿದರು.

2020 ರಲ್ಲಿ, ಅಸ್ಸಾಂ ಎಲ್ಲಾ ಸರ್ಕಾರಿ ಮದರಸಾಗಳನ್ನು ವಿಸರ್ಜಿಸಲು ಮತ್ತು ‘ಜಾತ್ಯತೀತ ಶಿಕ್ಷಣ ವ್ಯವಸ್ಥೆಯನ್ನು ಸುಗಮಗೊಳಿಸುವ’ ಪ್ರಯತ್ನದಲ್ಲಿ ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸಲು ನಿರ್ಧರಿಸಿತು. ಈ ವಿಚಾರ ಕೋರ್ಟ್ ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next