Advertisement

ಮಕ್ಕಳಿಗೆ ಸಂಸ್ಕಾರ ಕಲಿಸಿ

08:35 PM Jan 23, 2021 | Team Udayavani |

ಕೋಲಾರ: ಮಕ್ಕಳಿಗೆ ಆಸ್ತಿ ಮಾಡದೆ,ಅವರಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ, ಬದುಕು ಕಲಿಸಿಕೊಡುವ ಮೂಲಕ ಸಮಾಜಕ್ಕೆ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ತಾಲೂಕು ದಂಡಾಧಿಕಾರಿ ಶೋಭಿತಾ ಹೇಳಿದರು.

Advertisement

ತಾಲೂಕಿನ ಹೊನ್ನೇನಹಳ್ಳಿ ಗ್ರಾಪಂನಲ್ಲಿ ಮಕ್ಕಳ ಹಕ್ಕುಗಳ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಬಾಲ್ಯವನ್ನು ಅರಳಿಸಬೇಕು, ಚಿವುಟಬಾರದು. ಶಿಕ್ಷಕರು ಸಮಯಪಾಲನೆಗೆ ಗಮನ ನೀಡಬೇಕು. ಸಕಾರಣವಿಲ್ಲದೇ ಶಾಲೆ ಬಿಡಬಾರದು. ಮಕ್ಕಳನ್ನು ಸತøಜೆಗಳಾಗಿ ನಿರ್ಮಾಣ ಮಾಡುವ ಕಾಯಕ ಎಲ್ಲರ ಹೊಣೆಯಾಗಿದೆ ಎಂದರು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವುದರೊಂದಿಗೆ, ಬಾಲ್ಯ ವಿವಾಹ ಪದ್ಧತಿಯನ್ನು ಸಹ ನಿರ್ಮೂಲನೆ ಮಾಡ  ಬೇಕು. ಶಾಲೆಗಳಿಗೆ ಮೂಲಭೂತವಾಗಿ ಅಗತ್ಯಗಳನ್ನು ಪೂರೈಸುವ ಭರವಸೆ ನೀಡಿದರು.

ಇದನ್ನೂ ಓದಿ:ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರು

ಪಿಆರ್‌ ಇಡಿ ಇಂಜಿನಿಯರ್‌ ಪಂಚಾಯ್ತಿ ನೋಡಲ್‌ ಅಧಿಕಾರಿ ಮಾತನಾಡಿ, ಯಾವ್ಯಾವ ಶಾಲೆಗಳು ಶಿಥಿಲಗೊಂಡಿವೆ ಅವುಗಳನ್ನು ನೆಲಸಮ ಮಾಡಲು ಕೂಡಲೇ ಅನುಮತಿ ನೀಡಲಾಗುವುದು ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶೋಭಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಿಮ್ಮಸಂದ್ರ ನಾಗರಾಜ್‌, ಸಮೂಹ ಸಂಪನ್ಮೂಲ ವ್ಯಕ್ತಿ ಸುಜಾತ,  ಶಿಕ್ಷಕರು ಪಂಚಾಯಿತಿಯ ಎಲ್ಲಾ ಸಿಬ್ಬಂದಿ, ಮಕ್ಕಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next